ಲಂಡನ್ (ಪಿಟಿಐ): ಭೂ ಉಪಗ್ರಹ ಕಕ್ಷೆಯ ಸುತ್ತಲೂ ಬಾಹ್ಯಾಕಾಶ ತ್ಯಾಜ್ಯ ಹೆಚ್ಚುವ ಲಕ್ಷಣಗಳಿದ್ದು, ಭವಿಷ್ಯದಲ್ಲಿ ಉಪಗ್ರಹ ಉಡಾವಣೆ ಕಷ್ಟಕರವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಮಾನವ ನಿರ್ಮಿತ ವಸ್ತುಗಳ ತ್ಯಾಜ್ಯ ಬಾಹ್ಯಕಾಶದಲ್ಲಿ ವಿಷಮತೆಯ ಹಂತ ತಲುಪಲಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ)ಯ ಸಂಶೋಧಕರು ತಿಳಿಸಿದ್ದಾರೆ.
ಬಾಹ್ಯಾಕಾಶದಲ್ಲಿ ತ್ಯಾಜ್ಯದ ಪ್ರಮಾಣ ಜಾಸ್ತಿಯಾಗಿ ಅವು ಒದಕ್ಕೊಂದು ಡಿಕ್ಕಿ ಹೊಡೆದು ಕಣಗಳು ಸೃಷ್ಟಿಯಾಗುತ್ತವೆ. ಈ ಕಣಗಳು ಮುಂದೆ ಬಾಹ್ಯಾಕಾಶ ಕಸದತೊಟ್ಟಿಗೆ ಮೂಲವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
‘ಉಪಗ್ರಹಗಳ ಉಡಾವಣೆ ಇದೇ ರೀತಿ ಮುಂದುವರಿದರೆ ತ್ಯಾಜ್ಯಗಳು ಡಿಕ್ಕಿಯಾಗುವ ಪ್ರಮಾಣ ಶೀಘ್ರದಲ್ಲೇ ಈಗಿರುವುದಕ್ಕಿಂತಲೂ 25 ಪಟ್ಟು ಹೆಚ್ಚಾಗಲಿದೆ. ಇದರಿಂದಾಗಿ ಉಪಗ್ರಹಗಳು ಭೂ ಕಕ್ಷೆಯ ಸಮೀಪ ಸುತ್ತುವುದು ಅಸಾಧ್ಯವಾಗಲಿದೆ’ ಎಂದು ಇಎಸ್‌ಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.