ನ್ಯೂಯಾರ್ಕ್ (ಪಿಟಿಐ): ಇದೊಂದು ವಿಚಿತ್ರ, ವಿಲಕ್ಷಣ. ಮನುಷ್ಯನನ್ನು ಹೆಬ್ಬಾವು ನುಂಗಿರುವ ಸುದ್ದಿ ಕೇಳಿದ್ದೇವೆ, ಆದರೆ ಇಲ್ಲೊಬ್ಬ ವ್ಯಕ್ತಿ ಹೆಬ್ಬಾವಿಗೇ ಕಚ್ಚಿ ಸುದ್ದಿಯಲ್ಲಿದ್ದಾನೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಈ ವ್ಯಕ್ತಿ ಹೆಬ್ಬಾವಿಗೆ ಕಚ್ಚಿದ್ದರಿಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹೆಬ್ಬಾವು ಗಂಭೀರವಾಗಿ ಗಾಯಗೊಂಡಿದೆ.
ಸ್ಯಾಕ್ರಮೆಂಟೊ ನಗರದಲ್ಲಿ ಸಾಕಿದ ಹೆಬ್ಬಾವಿಗೆ ಕಚ್ಚಿದ ಆರೋಪದ ಮೇಲೆ ಡೇವಿಡ್ ಸೆಂಕ್ (54) ಎಂಬಾತನನ್ನು ಶುಕ್ರವಾರ ಸಂಜೆ ಬಂಧಿಸಲಾಗಿದೆ ಸುದ್ದಿಸಂಸ್ಥೆಯೊಂದನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
ತುರ್ತು ಚಿಕಿತ್ಸೆಯ ನಂತರ ಹೆಬ್ಬಾವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.
ಈ ಮಧ್ಯೆ ಜೈಲಿನಲ್ಲಿರುವ ಸೆಂಕ್, `ನಾನು ಹಾಗೆ ಮಾಡಿದೆನಾ? ಘಟನೆ ಬಗ್ಗೆ ನನಗೆ ನೆನಪಿಲ್ಲ. ನನಗೆ ಕುಡಿಯುವ ಚಟವಿದೆ. ಹೆಬ್ಬಾವಿನ ಮಾಲೀಕನನ್ನು ಕಂಡರೆ ನನ್ನ ವಿಷಾದ ತಿಳಿಸಿ. ಚಿಕಿತ್ಸೆಯ ವೈದ್ಯಕೀಯ ವೆಚ್ಚವನ್ನು ನಾನು ಭರಿಸುತ್ತೇನೆ~ ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.