ವಾಷಿಂಗ್ಟನ್ (ಐಎಎನ್‌ಎಸ್): ಅಮೆರಿಕದ ವಿದೇಶಾಂಗ ಸಚಿವಾಲಯ ಅಸಾಧಾರಣ ಸಾಧನೆ ಮಾಡಿದ ಮಹಿಳೆಯರಿಗೆ ನೀಡುವ ಪ್ರಶಸ್ತಿಗೆ ಭಾರತದ ‘ಆ್ಯಸಿಡ್ ದಾಳಿ ನಿಲ್ಲಿಸಿ’ ಅಭಿಯಾನದ ಸಂಚಾಲಕಿ ಲಕ್ಷ್ಮಿ ಪಾತ್ರರಾಗಿದ್ದಾರೆ.
ಬುಧವಾರ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಮೆರಿಕದ ಪ್ರಥಮ ಮಹಿಳೆ ಮಿಶೆಲ್ ಒಬಾಮ ಭಾಗವಹಿಸಲಿದ್ದಾರೆ.
ತನ್ನ ಪ್ರೇಮಭಿಕ್ಷೆಯನ್ನು ತಿರಸ್ಕರಿಸಿದ್ದಕ್ಕಾಗಿ ಸ್ನೇಹಿತೆಯ ಸಹೋದರ 16 ವರ್ಷದ ಲಕ್ಷ್ಮಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದನು. ಇದರಿಂದ ಅಂದ ಕಳೆದುಕೊಂಡರೂ ಧೃತಿಗೆಡದ ಲಕ್ಷ್ಮಿ, ಭಾರತದಲ್ಲಿ ‘ಆ್ಯಸಿಡ್ ದಾಳಿ ನಿಲ್ಲಿಸಿ’ ಹೋರಾಟ ನಡೆಸಿದ್ದರು. ಅವರ ಹೋರಾಟದ ಫಲವಾಗಿ ಸುಪ್ರೀಂಕೋರ್ಟ್, ಸರ್ಕಾರಗಳಿಗೆ ಆ್ಯಸಿಡ್ ಮಾರಾಟ ನಿಷೇಧಿಸುವಂತೆ ಆದೇಶ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.