ADVERTISEMENT

ದಕ್ಷಿಣ ಆಫ್ರಿಕಾ: ಸ್ಫೋಟ– ಒಬ್ಬ ಸಾವು

ಎಪಿ
Published 20 ಜುಲೈ 2023, 16:48 IST
Last Updated 20 ಜುಲೈ 2023, 16:48 IST
ಜೊಹಾನಸ್‌ಬರ್ಗ್‌ನಲ್ಲಿ ಸಂಭವಿಸಿದ ಶಂಕಿತ ಅನಿಲ ಸ್ಫೋಟದಿಂದಾಗಿ ರಸ್ತೆಯೊಂದು ಬಿರುಕು ಬಿಟ್ಟಿರುವುದು –ಎಎಫ್‌ಪಿ ಚಿತ್ರ
ಜೊಹಾನಸ್‌ಬರ್ಗ್‌ನಲ್ಲಿ ಸಂಭವಿಸಿದ ಶಂಕಿತ ಅನಿಲ ಸ್ಫೋಟದಿಂದಾಗಿ ರಸ್ತೆಯೊಂದು ಬಿರುಕು ಬಿಟ್ಟಿರುವುದು –ಎಎಫ್‌ಪಿ ಚಿತ್ರ   

ಜೋಹನ್ಸ್‌ಬರ್ಗ್‌: ‘ದಕ್ಷಿಣ ಆಫ್ರಿಕಾದ ಕೇಂದ್ರ ಭಾಗವಾದ ಜೋಹನ್ಸ್‌ಬರ್ಗ್‌ನ ನೆಲದಡಿಯಲ್ಲಿ ಸ್ಫೋಟ ಸಂಭವಿಸಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ. ವಾಹನಗಳು ಪಲ್ಟಿಯಾಗಿದ್ದು ಒಬ್ಯ ವ್ಯಕ್ತಿ ಮೃತಪಟ್ಟಿದ್ದಾರೆ. 48 ಜನರು ಗಾಯಗೊಂಡಿದ್ದಾರೆ. ಈ ದುರಂತಕ್ಕೆ ಅನಿಲ ಸ್ಫೋಟ ಕಾರಣವಿರಬಹುದು ಎಂದು ತುರ್ತು ಸೇವಾ ಘಟಕದ ಅಧಿಕಾರಿಗಳು ಶಂಕಿಸಿದ್ದಾರೆ.

ಆದರೆ, ಈ ಸ್ಫೋಟಕ್ಕೆ ಅನಿಲ ಪೂರೈಕೆಯ ಪೈಪ್‌ಗಳು ಕಾರಣವಲ್ಲ ಎಂದು ಅನಿಲ ಪೂರೈಕೆಯ ಕಂಪನಿ ತಿಳಿಸಿದೆ.

ಜೊಹಾನಸ್‌ಬರ್ಗ್‌ನಲ್ಲಿ ಸಂಭವಿಸಿದ ಶಂಕಿತ ಅನಿಲ ಸ್ಫೋಟದಿಂದಾಗಿ ವಾಹನವೊಂದು ಹಾನಿಗೀಡಾಗಿರುವುದು –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT