ADVERTISEMENT

10 ಕೋಟಿ ವರ್ಷ ಮೊದಲೇ ಹುಟ್ಟಿದ್ದ ಚಂದ್ರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST

ನ್ಯೂಯಾರ್ಕ್ (ಪಿಟಿಐ): ಈ ಹಿಂದೆ ಊಹಿಸಿದ್ದಕ್ಕಿಂತಲೂ  10 ಕೋಟಿ ವರ್ಷ­ಗಳ ಹಿಂದೆಯೇ ಚಂದ್ರ ರೂಪು­ಗೊಂಡಿತ್ತು ಎಂದು ಹೊಸ ಅಧ್ಯಯನ­ವೊಂದು ಹೇಳಿದೆ.

ಅಂದರೆ, 440 ರಿಂದ 445 ಕೋಟಿ ವರ್ಷಗಳ ಹಿಂದೆ ಚಂದ್ರನ ಸೃಷ್ಟಿಯಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
456 ಕೋಟಿ ವರ್ಷಗಳ ಹಿಂದೆ ನಿಗೂಢ ಗ್ರಹವೊಂದು ಭೂಮಿಗೆ ಅಪ್ಪಳಿಸಿದ ಪರಿಣಾಮವಾಗಿ ಚಂದ್ರ ಸೃಷ್ಟಿ­ಯಾಯಿತು ಎಂದು ಇದುವರೆಗೆ ನಂಬಲಾಗಿತ್ತು.

ಆದರೆ, ಇತ್ತೀಚೆಗೆ ಚಂದ್ರನಿಂದ ಸಂಗ್ರಹಿಸಿದ ಶಿಲೆಗಳನ್ನು ಆಧಾರವಾಗಿಟ್ಟುಕೊಂಡು ನಡೆಸಿದ ಅಧ್ಯಯನದಿಂದ  ಈ ವಿಚಾರ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.