ADVERTISEMENT

ಅಮೆರಿಕ: ಟೆನ್ನೆಸ್ಸಿಯಲ್ಲಿ ಪ್ರವಾಹ, 22 ಸಾವು

ಏಜೆನ್ಸೀಸ್
Published 23 ಆಗಸ್ಟ್ 2021, 5:21 IST
Last Updated 23 ಆಗಸ್ಟ್ 2021, 5:21 IST
ಟೆನ್ನೆಸ್ಸಿಯಲ್ಲಿ ಪ್ರವಾಹಕ್ಕೆ ಸಿಲುಕಿದ ಕಾರೊಂದು ಜಖಂಗೊಂಡಿರುವುದು  –ಎಪಿ/ಪಿಟಿಐ ಚಿತ್ರ
ಟೆನ್ನೆಸ್ಸಿಯಲ್ಲಿ ಪ್ರವಾಹಕ್ಕೆ ಸಿಲುಕಿದ ಕಾರೊಂದು ಜಖಂಗೊಂಡಿರುವುದು  –ಎಪಿ/ಪಿಟಿಐ ಚಿತ್ರ   

ವೇವರ್ಲಿ (ಅಮೆರಿಕ): ಅಮೆರಿಕದ ಟೆನ್ನೆಸ್ಸಿ ರಾಜ್ಯದಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಕನಿಷ್ಠ 22 ಮಂದಿ ಮೃತಪಟ್ಟಿದ್ದು, ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ.

ಪ್ರವಾಹದಿಂದಾಗಿ ರಸ್ತೆಗಳು ಕೊಚ್ಚಿಕೊಂಡು ಹೋಗಿದ್ದು, ಮೊಬೈಲ್‌ ಗೋಪುರಗಳು, ದೂರವಾಣಿ ತಂತಿಗಳು ತುಂಡಾಗಿವೆ. ಹೀಗಾಗಿ ನಾಪತ್ತೆಯಾದವರು ಎಲ್ಲಿದ್ದಾರೆ ಎಂಬುದನ್ನು ಕುಟುಂಬದ ಇತರ ಸದಸ್ಯರಿಗೆ ತಿಳಿಯುವುದು ಕಷ್ಟವಾಗಿದೆ.

‘ಟೆನ್ನೆಸ್ಸಿಯಲ್ಲಿ ಇದುವರೆಗೆ ಒಂದು ದಿನದಲ್ಲಿ ಸುರಿದ ಮಳೆಯ ದಾಖಲೆ ಪ್ರಮಾಣ 14 ಇಂಚುಗಳಷ್ಟು. ಆದರೆ ಈ ಬಾರಿ 17 ಇಂಚುಗಳಷ್ಟು ಮಳೆ ಸುರಿದಿದ್ದು, ಇದರಿಂದಾಗಿ ಹಠಾತ್‌ ಪ್ರವಾಹ ಉಂಟಾಗಿ ಇಷ್ಟು ದೊಡ್ಡ ಅನಾಹುತ ಎದುರಾಗಿದೆ’ ಎಂದು ತುರ್ತು ನಿರ್ವಹಣಾ ನಿರ್ದೇಶಕ ಪ್ಯಾಟ್ರಿಕ್‌ ಶೀಹೆನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.