ADVERTISEMENT

3 ತಿಂಗಳ ಬಳಿಕ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST

ಬೀಜಿಂಗ್ (ಎಎಫ್‌ಪಿ): ಸೋಮವಾರ ಇಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ಕಾಂಬೋಡಿಯಾದ ಮಾಜಿ ದೊರೆ ನರೊದಮ್ ಸಿಹನೌಕ್ ಅವರಿಗೆ ಅಂತಿಮ ನಮನ ಸಲ್ಲಿಸುವ ಸಲುವಾಗಿ ಬುಧವಾರ ಸಾವಿರಾರು ಜನರು ಕಾಂಬೋಡಿಯಾದ ರಾಜಧಾನಿಯ ಬೀದಿಗಳಲ್ಲಿ ನೆರೆದಿದ್ದರು. 

ಕ್ಯಾನ್ಸರ್, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ  89ರ ಹರೆಯದ ನರೊದಮ್ ಬೀಜಿಂಗ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಪಾರ್ಥಿವ ಶರೀರವನ್ನು ಬಿಳಿ ಹೂಗಳಿಂದ ಅಲಂಕರಿಸಿದ ವಿಶೇಷ ವಿಮಾನದಲ್ಲಿ ಬೀಜಿಂಗ್‌ನಿಂದ ಕಾಂಬೋಡಿಯಾದ ರಾಜಧಾನಿಗೆ ತರಲಾಯಿತು.

ಸಿಹನೌಕ್ ಅವರ ಪಾರ್ಥಿವ ಶರೀರವನ್ನು ಮೂರು ತಿಂಗಳುಗಳ ಕಾಲ ಅರಮನೆಯಲ್ಲಿಟ್ಟ ಬಳಿಕ  ಅಂತ್ಯಸಂಸ್ಕಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.