ADVERTISEMENT

ಫಿಲಿಪ್ಪೀನ್‌ ಗುಂಡಿನ ದಾಳಿ: ಮೂವರ ಸಾವು

ಏಜೆನ್ಸೀಸ್
Published 24 ಜುಲೈ 2022, 12:59 IST
Last Updated 24 ಜುಲೈ 2022, 12:59 IST
ದಾಳಿ ನಡೆದ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸುತ್ತಿರುವ ಪೊಲೀಸ್ ಅಧಿಕಾರಿ –ಎಎಫ್‌ಪಿ ಚಿತ್ರ
ದಾಳಿ ನಡೆದ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸುತ್ತಿರುವ ಪೊಲೀಸ್ ಅಧಿಕಾರಿ –ಎಎಫ್‌ಪಿ ಚಿತ್ರ   

ಮನಿಲಾ (ಎಪಿ): ಫಿಲಿಪ್ಪೀನ್‌ ರಾಜಧಾನಿಯ ಹೊರವಲಯದ ಕ್ವೆಝಾನ್‌ ನಗರದಲ್ಲಿರುವ ಅಟೆನಿಯೊ ದೆ ಮನಿಲಾ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಭಾನುವಾರ ಬಂದೂಕುಧಾರಿ ವ್ಯಕ್ತಿ ನಡೆಸಿದ ಗುಂಡಿನ ದಾಳಿಯಲ್ಲಿ ಫಿಲಿಪ್ಪೀನ್‌ ನಗರದ ಮಾಜಿ ಮೇಯರ್‌ ಸೇರಿ ಕನಿಷ್ಠ ಮೂವರು ಮೃತಪಟ್ಟು, ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ಬೆನ್ನಲ್ಲೇ ಎರಡು ಪಿಸ್ತೂಲ್‌ಗಳನ್ನು ಹೊಂದಿದ್ದ ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದೆ. ವಿಶ್ವವಿದ್ಯಾಲಯದಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದೆ. ನಿಗದಿಯಾಗಿದ್ದ ಘಟಿಕೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಘಟನೆ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರಿ ಭದ್ರತೆ ಮತ್ತು ಕಟ್ಟುನಿಟ್ಟಿನ ಬಂದೂಕು ನಿಷೇಧ ಕ್ರಮ ಜಾರಿಯಲ್ಲಿದ್ದರೂ ಈ ಗುಂಡಿನ ದಾಳಿ ನಡೆದಿರುವುದು ಅಚ್ಚರಿ ಮೂಡಿಸಿದೆ. ಇದೇ ನಗರದಲ್ಲಿ ನೂತನ ಅಧ್ಯಕ್ಷ ಫರ್ಡಿನಂಡ್‌ ಮಾರ್ಕೊಸ್‌ ಜೂನಿಯರ್‌ ಅವರು ಸೋಮವಾರ ತಮ್ಮ ಚೊಚ್ಚಲ ಸಾರ್ವಜನಿಕ ಭಾಷಣ ಮಾಡುವ ಕಾರ್ಯಕ್ರಮವಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.