ADVERTISEMENT

4ನೇ ಬಾರಿ ಚಾನ್ಸೆಲರ್‌ ಗದ್ದುಗೆ ಮರ್ಕೆಲ್‌

ಏಜೆನ್ಸೀಸ್
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST
4ನೇ ಬಾರಿ ಚಾನ್ಸೆಲರ್‌ ಗದ್ದುಗೆ ಮರ್ಕೆಲ್‌
4ನೇ ಬಾರಿ ಚಾನ್ಸೆಲರ್‌ ಗದ್ದುಗೆ ಮರ್ಕೆಲ್‌   

ಬರ್ಲಿನ್‌: ಏಂಜೆಲಾ ಮರ್ಕೆಲ್‌ ಅವರು ನಾಲ್ಕನೇ ಅವಧಿಗೆ ಜರ್ಮನಿಯ ಚಾನ್ಸೆಲರ್‌ ಆಗಿಯಾಗಿದ್ದು, ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಂಸತ್‌ನಲ್ಲಿ  ಬುಧವಾರ ನಡೆದ ರಹಸ್ಯ ಮತದಾನದಲ್ಲಿ 709 ಸಂಸದರಲ್ಲಿ 364 ಮಂದಿ ಮರ್ಕೆಲ್‌ ಅವರ ಪರವಾಗಿ ಮತ ಚಲಾಯಿಸಿದ್ದಾರೆ. ಈ ಪ್ರಕ್ರಿಯೆ ಮುಗಿದ ಬಳಿಕ ರಾಷ್ಟ್ರಪತಿ ಫ್ರಾಂಕ್‌ ವಾಲ್ಟರ್‌ ಸ್ಟೈನ್ಮಿಯರ್‌ ಅವರು ಮರ್ಕೆಲ್‌ ಅವರ ಆಯ್ಕೆ ಘೋಷಿಸಿದ್ದಾರೆ.

ಈ ಮೂಲಕ ತಮ್ಮ ಮೈತ್ರಿಕೂಟಕ್ಕೆ ಸೋಷಿಯಲ್‌ ಡೆಮಾಕ್ರಟಿಕ್‌ ಪಕ್ಷ (ಎಸ್‌ಡಿಪಿ)ವನ್ನು ಸೇರಿಸಿಕೊಂಡು ಸರ್ಕಾರ ರಚಿಸುವಲ್ಲಿ ಮರ್ಕೆಲ್‌ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಆರು ತಿಂಗಳ ಕಾಲ ತಲೆದೋರಿದ್ದ ಸರ್ಕಾರ ರಚನೆಯ ಬಿಕ್ಕಟ್ಟು ಶಮನಗೊಂಡಿದೆ.

ADVERTISEMENT

ಈ ಮಹಾಮೈತ್ರಿಕೂಟದಿಂದಾಗಿ ಸರ್ಕಾರದ ಸಂಪುಟದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಎಸ್‌ಡಿಪಿ ಪಕ್ಷದ ಸಂಸದರಿಬ್ಬರು ಹಣಕಾಸು, ವಿದೇಶಾಂಗ ವ್ಯವಹಾರಗಳ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.

ಎಸ್‌ಪಿಡಿ ಹಿಂದಿನ ಅನೇಕ ಚುನಾವಣೆಗಳಲ್ಲಿ ಸೋತಿದ್ದು, ಮರ್ಕೆಲ್‌ ಅವರಿಗೆ ಇನ್ನೊಂದು ಅವಧಿ ದೊರಕಬಾರದು ಎಂದೇ ಈ ಮೊದಲು ಇಚ್ಛಿಸಿತ್ತು. ಇತರ ಎರಡು ಸಣ್ಣ ಪಕ್ಷಗ
ಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮರ್ಕೆಲ್‌ ಅವರ ಯೋಜನೆ ವಿಫಲವಾದ ನಂತರ, ಎಸ್‌ಪಿಡಿ ತನ್ನ ನಿಲುವು ಬದಲಾಯಿಸಿಕೊಂಡಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಜರ್ಮನಿಯ ಸಂಸತ್ತಿನ ಕೆಳಮನೆ (ಬುಂಡೆಸ್ಟ್ಯಾಗ್‌)ಗೆ ಚುನಾವಣೆ ನಡೆದಿತ್ತು.

ಪ್ಯಾರಿಸ್‌ಗೆ

ಐರೋಪ್ಯ ಒಕ್ಕೂಟದ ಸುಧಾರಣಾ ಯೋಜನೆಗಳ ಬಗ್ಗೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್‌ ಅವರೊಂದಿಗೆ ಚರ್ಚಿಸಲು ಮರ್ಕೆಲ್‌ ಅವರು ಶುಕ್ರವಾರ ಪ್ಯಾರಿಸ್‌ಗೆ ತೆರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.