ADVERTISEMENT

ಅಮೆರಿಕ ಸಂಸದೀಯ ಸಮಿತಿ: ನಾಲ್ವರು ಭಾರತೀಯ ಮೂಲದವರ ನೇಮಕ

ಪಿಟಿಐ
Published 2 ಫೆಬ್ರುವರಿ 2023, 14:29 IST
Last Updated 2 ಫೆಬ್ರುವರಿ 2023, 14:29 IST
   

ವಾಷಿಂಗ್ಟನ್ : ಭಾರತ ಮೂಲದ ನಾಲ್ವರು ಅಮೆರಿಕನ್‌ ಸಂಸದರಾದ ಪ್ರಮೀಳಾ ಜಯಪಾಲ್, ಅಮಿ ಬೇರಾ, ರಾಜಾ ಕೃಷ್ಣಮೂರ್ತಿ ಮತ್ತು ರೋ ಖನ್ನಾ ಅವರನ್ನು ಮೂರು ಪ್ರಮುಖ ಸದನ ಸಮಿತಿಗಳ ಸದಸ್ಯರನ್ನಾಗಿ ನೇಮಿಸಲಾಗಿದೆ.

ಪ್ರಮೀಳಾ ಜಯಪಾಲ್ ಅವರನ್ನು ವಲಸೆ ಕುರಿತ ‘ಸದನ ನ್ಯಾಯಾಂಗ ಸಮಿತಿ’ ಸದಸ್ಯರಾಗಿ ನೇಮಿಸಲಾಗಿದೆ. ಅಮಿ ಬೇರಾ ಅವರನ್ನು ಗುಪ್ತಚರ ಸಂಬಂಧಿತ ವಿಷಯಗಳನ್ನು ನಿರ್ವಹಿಸುವ ಸಮಿತಿ ಸದಸ್ಯರಾಗಿ ನೇಮಿಸಲಾಗಿದೆ.

ಚೀನಾದ ವಿವಿಧ ನಡವಳಿಕೆಗಳ ಕುರಿತಾದ ಅಂಶಗಳನ್ನು ಪರಿಶೀಲಿಸಲು ಹೊಸದಾಗಿ ರಚಿಸಲಾಗಿರುವ ಅಮೆರಿಕದ ಸಂಸತ್ತಿನ ಸದನ ಸಮಿತಿಯ ರ್‍ಯಾಂಕಿಂಗ್ ಸದಸ್ಯರಾಗಿ ರಾಜಾ ಕೃಷ್ಣಮೂರ್ತಿ ಅವರನ್ನು ನೇಮಿಸಲಾಗಿದೆ. ರೋ ಖನ್ನಾ ಅವರನ್ನೂ ಈ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.