ADVERTISEMENT

44 ಟನ್ ಬೆಳ್ಳಿ ವಶ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ಲಂಡನ್ (ಪಿಟಿಐ): ಮುಳುಗಿದ್ದ ಬ್ರಿಟಿಷ್ ಸರಕು ಸಾಗಣೆ ಹಡಗಿನಿಂದ ಸುಮಾರು 203 ಕೋಟಿ ರೂಪಾಯಿ ಮೌಲ್ಯದ ಒಟ್ಟು 44 ಟನ್ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

ಎರಡನೇ ಜಾಗತಿಕ ಸಮರ ಸಮಯದಲ್ಲಿ ಭಾರತದಿಂದ ವಾಪಸಾಗುವ ಸಂದರ್ಭ ಈ ಹಡಗನ್ನು ನಾಜಿಯು-ದೋಣಿಯಿಂದ ಮುಳುಗಿಸಿ ಇಡಲಾಗಿತ್ತು.

ಸುಮಾರು 15,420 ಅಡಿ ಆಳಕ್ಕೆ ಮುಳುಗಿದ್ದ ಈ ಹಡಗಿನ ಅವಶೇಷವನ್ನು ಅಮೆರಿಕ ಮೂಲದ ಹಡಗು ಪರಿಶೋಧಕ ಕಂಪೆನಿಯೊಂದು ಹೊರತೆಗೆದಿದೆ.

ADVERTISEMENT

ಆಳ ಸಮುದ್ರದಿಂದ ಹೊರತೆಗೆಯಲಾದ ಬೆಲೆಬಾಳುವ ಲೋಹವನ್ನು ಇಷ್ಟೊಂದು ಪ್ರಮಾಣದಲ್ಲಿ ಹೊರತೆಗೆದಿದ್ದು ಇದೇ ಮೊದಲು ಎಂದು `ಡೇಲಿ ಮೇಲ್~ ವರದಿಮಾಡಿದೆ.

ಹಿಮದಿಂದ ಆವೃತ ಐರ‌್ಲೆಂಡ್‌ನಿಂದ ಸುಮಾರು 300 ಮೈಲು ದೂರದಲ್ಲಿ ಈ ಹಡಗು 1941ರ ಫೆಬ್ರುವರಿ 17 ರಂದು ಮುಳುಗಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.