ADVERTISEMENT

ಹಫೀಸ್‌ ಸಯೀದ್‌ಗೆ ಸೇರಿದ ಸಂಘ–ಸಂಸ್ಥೆಗಳನ್ನು ವಶಕ್ಕೆ ಪಡೆಯಲು ಮುಂದಾದ ಪಾಕ್‌ ಸರ್ಕಾರ

ಏಜೆನ್ಸೀಸ್
Published 1 ಜನವರಿ 2018, 11:23 IST
Last Updated 1 ಜನವರಿ 2018, 11:23 IST
ಹಫೀಸ್ ಸಯೀದ್‌
ಹಫೀಸ್ ಸಯೀದ್‌   

ಇಸ್ಲಾಮಾಬಾದ್: 2008ರ ಮುಂಬೈ ದಾಳಿಯ ರೂವಾರಿ ಹಫೀಸ್ ಸಯೀದ್‌ಗೆ ಸೇರಿದ ಸಂಘ–ಸಂಸ್ಥೆಗಳು, ಆಸ್ತಿ ಮತ್ತು ಹಣಕಾಸಿನ ಮೂಲಗಳನ್ನು ತನ್ನ ವಶಕ್ಕೆ ಪಡೆಯಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.

ಹಫೀಸ್‌ ಸಯೀದ್‌ನನ್ನು ಅಮೆರಿಕ ಭಯೋತ್ಪಾದಕ ಎಂದು ಘೋಷಿಸಿದ ಬಳಿ ಪಾಕಿಸ್ತಾನ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಈಗಾಗಲೇ ಉನ್ನತಮಟ್ಟದ ಸಭೆಗಳು ನಡೆದಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.

‌ಹಫೀಸ್‌ ಸಯೀದ್‌ಗೆ ಸೇರಿದ ಜಮಾತ್ ಉದ್ ದವಾ (ಜೆಯುಡಿ) ಮತ್ತು  ಫಲಾಹ್‌–ಎ–ಇನ್‌ಸಾನಿಯತ್‌ ಸಂಘಟನೆಗಳು ಲಷ್ಕರ್–ಎ–ತಯಬಾ (ಎಲ್‌ಇಟಿ) ಉಗ್ರ ಸಂಘಟನೆಯೊಂದಿಗೆ ನೇರ ಸಂಬಂಧ ಹೊಂದಿರುವಂಥವು ಎಂದು ಅಮೆರಿಕ ಹೇಳಿತ್ತು.

ADVERTISEMENT

2008 ಮುಂಬೈ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು. ಈ ಕೃತ್ಯದ ಸಂಚು ರೂಪಿಸಿದ್ದ ಆರೋಪ ಹಫೀಸ್‌ ಸಯೀದ್‌ ಮೇಲಿದೆ. ಆದರೆ, ಹಫೀಸ್‌ ಈ ಆರೋಪವನ್ನು ನಿರಾಕರಿಸುತ್ತಲೇ ಬಂದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.