ADVERTISEMENT

ಬ್ರಿಟನ್: ಛಾಯಾ ಸಂಪುಟಕ್ಕೆ ಸಿಖ್‌ ಸಂಸದೆ ಆಯ್ಕೆ

ಪಿಟಿಐ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST
ಪ್ರೀತ್‌ಕೌರ್‌ ಗಿಲ್‌
ಪ್ರೀತ್‌ಕೌರ್‌ ಗಿಲ್‌   

ಲಂಡನ್‌ : ಬ್ರಿಟನ್‌ ಸಂಸತ್‌ಗೆ ಆಯ್ಕೆಯಾದ ಮೊದಲ ಸಿಖ್‌ ಮಹಿಳೆ ಪ್ರೀತ್‌ಕೌರ್‌ ಗಿಲ್‌ ಅವರನ್ನು ಇಲ್ಲಿನ ವಿರೋಧ ಪಕ್ಷವಾದ ಲೇಬರ್‌ ಪಾರ್ಟಿಯು ತನ್ನ ಛಾಯಾ ಸಂಪುಟಕ್ಕೆ ಆಯ್ಕೆ ಮಾಡಿದೆ.

ಬ್ರಿಟನ್‌ ಸಂಸತ್‌ನ ವಿರೋಧ ಪಕ್ಷದ ಹಿರಿಯ ಸದಸ್ಯರನ್ನು ಒಳಗೊಂಡ ತಂಡವನ್ನು ಛಾಯಾ ಸಂಪುಟ ಎಂದು ಕರೆಯಲಾಗುತ್ತದೆ. ಈ ಸಂಪುಟಕ್ಕೆ ಸದಸ್ಯ
ರನ್ನು ವಿರೋಧ ಪಕ್ಷದ ನಾಯಕ ಆಯ್ಕೆ ಮಾಡುತ್ತಾರೆ. ಆಡಳಿತ ನಡೆಸುತ್ತಿರುವ ಸರ್ಕಾರದ ಕಾರ್ಯವೈಖರಿಗಳ ಅವಲೋಕನ ನಡೆಸುವುದು ಛಾಯಾ ಸಂಪುಟದ ಕೆಲಸ. 

ಪ್ರತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರದ ನೀತಿ ಹಾಗೂ ನಿರ್ಧಾರದ ಕುರಿತು ಅವಲೋಕನ ನಡೆಸಿ ಅದನ್ನು ಪ್ರಶ್ನಿಸಲು ಈ ಸಂಪುಟದ ಸದಸ್ಯರನ್ನು ನೇಮಕ ಮಾಡಲಾಗುತ್ತದೆ. 

ADVERTISEMENT

2017ರಲ್ಲಿ ನಡೆದ ಬ್ರಿಟನ್‌ ಚುನಾವಣೆಯಲ್ಲಿ ಎಡ್ಗಬಾಸ್ಟನ್‌ ಕ್ಷೇತ್ರದಿಂದ ಪ್ರೀತ್‌ಕೌರ್‌ ಗಿಲ್‌ ಅವರು ಗೆಲುವು ಸಾಧಿಸಿದ್ದರು. ಈ ಮೂಲಕ ಪ್ರೀತ್‌ಕೌರ್‌ ಗಿಲ್‌ ಅವರು ಬ್ರಿಟನ್‌ ಸಂಸತ್‌ಗೆ ಆಯ್ಕೆಯಾದ ಮೊದಲ ಸಿಖ್‌ ಮಹಿಳೆ ಎಂಬ ಹೆಗ್ಗಳಿಕೆ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.