ADVERTISEMENT

ಟ್ರಂಪ್ ಹೋಟೆಲ್‌ನಲ್ಲಿ ‘ಶಿಟ್‌ಹೋಲ್’ ಪದ ಬಳಕೆ

ಪಿಟಿಐ
Published 14 ಜನವರಿ 2018, 20:08 IST
Last Updated 14 ಜನವರಿ 2018, 20:08 IST
ಟ್ರಂಪ್ ಹೋಟೆಲ್‌ನಲ್ಲಿ ‘ಶಿಟ್‌ಹೋಲ್’ ಪದ ಬಳಕೆ
ಟ್ರಂಪ್ ಹೋಟೆಲ್‌ನಲ್ಲಿ ‘ಶಿಟ್‌ಹೋಲ್’ ಪದ ಬಳಕೆ   

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಡೆತನದ ಇಲ್ಲಿನ ಹೋಟೆಲ್‌ನಲ್ಲಿ ‘ಶಿಟ್‌ಹೋಲ್’ (ಕೊಳಕು ಗುಂಡಿ) ಪದವನ್ನು ಬಳಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಲಾದ ವಿಡಿಯೊದಿಂದ ತಿಳಿದುಬಂದಿದೆ.

ಯಾವೆಲ್ಲ ದೇಶಗಳ ಜನರು ಅಮೆರಿಕಕ್ಕೆ ವಲಸೆ ಬರಬಾರದು ಎಂದು ಟ್ರಂಪ್ ಬಯಸುತ್ತಾರೋ, ಅಂಥ ದೇಶಗಳ ವಿರುದ್ಧ ಅವರು ‘ಶಿಟ್‌ಹೋಲ್’ ಪದ ಬಳಸಿದ್ದಾರೆ ಎಂಬ ಆರೋಪವಿದೆ. ಈ ಆರೋಪವನ್ನು ಟ್ರಂಪ್ ನಿರಾಕರಿಸಿದ್ದಾರೆ.

‘ಟ್ರಂಪ್ ಈ ಪದವನ್ನು ಬಳಸಿದ್ದಾರೆ’ ಎಂದು ಅಮೆರಿಕದ ಜನಪ್ರತಿನಿಧಿ ಡಿಕ್ ಡರ್ಬಿನ್ ಅವರು ಖಚಿತಪಡಿಸಿದ್ದಾರೆ.

ADVERTISEMENT

‘ನೀವು ವಾಷಿಂಗ್ಟನ್ ಡಿ.ಸಿ ನಿವಾಸಿಗಳಲ್ಲವೇ? ವಸತಿಗೆ ನಿಮಗೆ ಸ್ಥಳ ಬೇಕೇ? ನಮ್ಮ ಶಿಟ್‌ಹೋಲ್‌ನಲ್ಲಿ ಪ್ರಯತ್ನಿಸಿ. ಸ್ಥಳದ ಹೆಸರು ಶಿಟ್‌ಹೋಲ್’ ಎಂದು ಹೋಟೆಲ್‌ನ ಪ್ರವೇಶದ್ವಾರದಲ್ಲಿ ದೊಡ್ಡ ಅಕ್ಷರದಲ್ಲಿ ಫಲಕ ಹಾಕಲಾಗಿದೆ ಎಂಬ ಅಂಶ ರಾಬಿನ್ ಬೆಲ್ ಎಂಬುವವರ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಆದ ವಿಡಿಯೊದಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.