ADVERTISEMENT

‘ಪಾಕ್‌ ವಿರುದ್ಧದ ಹೇಳಿಕೆಗೆ ಸಮರ್ಥನೆ’

ಪಿಟಿಐ
Published 18 ಜನವರಿ 2018, 19:43 IST
Last Updated 18 ಜನವರಿ 2018, 19:43 IST
‘ಪಾಕ್‌ ವಿರುದ್ಧದ ಹೇಳಿಕೆಗೆ ಸಮರ್ಥನೆ’
‘ಪಾಕ್‌ ವಿರುದ್ಧದ ಹೇಳಿಕೆಗೆ ಸಮರ್ಥನೆ’   

ವಾಷಿಂಗ್ಟನ್‌: ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವಿರುದ್ಧ ನೀಡಿದ್ದ ಹೇಳಿಕೆಯನ್ನು ಅಮೆರಿಕ ಸಮರ್ಥಿಸಿಕೊಂಡಿದೆ.

‘ಅಮೆರಿಕ ಮೂರ್ಖತನದಿಂದ ಕಳೆದ 15 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಸುಮಾರು ₹2.1 ಲಕ್ಷ ಕೋಟಿ ಸಹಾಯ ನೀಡಿದೆ. ಆದರೆ ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ನಮಗೆ ಸುಳ್ಳು ಹೇಳಿದೆ ಮತ್ತು ವಂಚನೆ ಮಾಡಿದೆ. ನಮ್ಮ ನಾಯಕರು ಮೂರ್ಖರು ಎಂದು ಪಾಕಿಸ್ತಾನ ಭಾವಿಸಿದೆ. ಜತೆಗೆ ಉಗ್ರರಿಗೆ ಸುರಕ್ಷಿತ ತಾಣ ಒದಗಿಸುತ್ತಿದೆ. ಆದರೆ, ನಾವು ಅಫ್ಗಾನಿಸ್ತಾನದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಇದೊಂದು ಅರ್ಥಹೀನವಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೊಸ ವರ್ಷದ ಆರಂಭದಲ್ಲಿ ಟ್ವೀಟ್‌ ಮಾಡಿದ್ದರು. ಬಳಿಕ ಪಾಕಿಸ್ತಾನಕ್ಕೆ  ಭದ್ರತಾ ನೆರವು ನೀಡುವುದನ್ನು ಅಮೆರಿಕ ಸ್ಥಗಿತಗೊಳಿಸಿತ್ತು.

ಈ  ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸರಹ್‌ ಸ್ಯಾಂಡರ್ಸ್‌, ‘ನಮ್ಮ ನಿಲುವು ಸ್ಪಷ್ಟವಾಗಿದೆ. ಯಾವುದೇ ರೀತಿಯ ಗೊಂದಲವಿಲ್ಲ. ಪಾಕಿಸ್ತಾನಕ್ಕೆ ಆರ್ಥಿಕ ನೆರವು ಸ್ಥಗಿತಗೊಳಿಸಿದ್ದು ಸಹ ಮುಖ್ಯವಾಗಿತ್ತು’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.