ADVERTISEMENT

ಹೊತ್ತಿ ಉರಿದ ಬಸ್‌: 52 ಸಾವು

ಏಜೆನ್ಸೀಸ್
Published 18 ಜನವರಿ 2018, 20:16 IST
Last Updated 18 ಜನವರಿ 2018, 20:16 IST
ಬೆಂಕಿಗೆ ಆಹುತಿಯಾಗಿರುವ ಬಸ್‌ ಸುಟ್ಟು ಕರಕಲಾಗಿರುವುದು ರಾಯಿಟರ್ಸ್‌ ಚಿತ್ರ
ಬೆಂಕಿಗೆ ಆಹುತಿಯಾಗಿರುವ ಬಸ್‌ ಸುಟ್ಟು ಕರಕಲಾಗಿರುವುದು ರಾಯಿಟರ್ಸ್‌ ಚಿತ್ರ   

ಅಸ್ತಾನಾ: ರಷ್ಯಾಗೆ ತೆರಳುತ್ತಿದ್ದ ಬಸ್‌ವೊಂದು ಬೆಂಕಿಗೆ ಆಹುತಿಯಾಗಿದ್ದರಿಂದ 52 ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಕಜಕಿಸ್ತಾನದ ಅಕ್ತೊಬೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಐವರು ಸುರಕ್ಷಿತವಾಗಿ ಪಾರಾಗಿದ್ದಾರೆ. ಮೃತಪಟ್ಟವರೆಲ್ಲರೂ ಉಜ್ಬೆಕಿಸ್ತಾನಕ್ಕೆ ಸೇರಿದವರು. ಇವರೆಲ್ಲರೂ ವಲಸೆ ಕಾರ್ಮಿಕರಾಗಿದ್ದು, ರಷ್ಯಾಗೆ ತೆರಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತಕ್ಕೆ ಖಚಿತ ಕಾರಣಗಳು ತಿಳಿದು ಬಂದಿಲ್ಲ.

ಕಜಕಿಸ್ತಾನದ ಶ್ಯಾಮ್ಕೆಂಟ್‌ ನಗರದಿಂದ ಸುಮಾರು 1,900 ಕಿಲೋ ಮೀಟರ್‌ ದೂರದ ರಷ್ಯಾದ ಸಮರಾ ನಗರಕ್ಕೆ ಬಸ್‌ ತೆರಳುತ್ತಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.