ADVERTISEMENT

ಮಗುವಿನ ನಿರೀಕ್ಷೆಯಲ್ಲಿರುವ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡ

ಏಜೆನ್ಸೀಸ್
Published 19 ಜನವರಿ 2018, 19:30 IST
Last Updated 19 ಜನವರಿ 2018, 19:30 IST
ಪ್ರಧಾನಿ ಜೆಸಿಂಡ ಹಾಗೂ ಪತಿ ಕ್ಲಾರ್ಕ್
ಪ್ರಧಾನಿ ಜೆಸಿಂಡ ಹಾಗೂ ಪತಿ ಕ್ಲಾರ್ಕ್   

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡ ಆರ್ಡರ್ನ್ (37) ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದು, ಅಧಿಕಾರದಲ್ಲಿದ್ದಾಗ ಮಗುವಿಗೆ ಜನ್ಮ ನೀಡಿದ ದೇಶದ ಮೊದಲ ಪ್ರಧಾನಿಯಾಗಲಿದ್ದಾರೆ.

ಪತಿ ಕ್ಲಾರ್ಕ್ ಗೇಫೋರ್ಡ್ ಜೊತೆಗೂಡಿ ಈ ಖುಷಿಯ ವಿಷಯವನ್ನು ಹಂಚಿಕೊಂಡಿರುವ ಜೆಸಿಂಡ, ಜೂನ್ ವೇಳೆಗೆ ನಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದೇವೆ ಎಂದು ತಿಳಿಸಿದ್ದಾರೆ.

‘ಮಗುವಿನ ಜನನದ ನಂತರ ಆರು ವಾರ ವಿಶ್ರಾಂತಿ ಪಡೆಯುತ್ತೇನೆ. ಈ ವೇಳೆ ಉಪ ಪ್ರಧಾನಿ ವಿನ್ಸ್ಟನ್ ಪೀಟರ್ಸ್ ಪ್ರಧಾನಿ ಹುದ್ದೆ ಉಸ್ತುವಾರಿ ವಹಿಸಿಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ.‌

ADVERTISEMENT

ಮಗು ಹೊಂದುವ ಉದ್ದೇಶವಿದೆಯೇ ಎಂದು ಚುನಾವಣಾ ಪ್ರಚಾರ ವೇಳೆ ತಮಗೆ ಕೇಳಿದ್ದ ಪ್ರಶ್ನೆಗೆ, ಗರ್ಭ ಧರಿಸುವುದು ಮಹಿಳೆಯ ಉದ್ಯೋಗಾವಕಾಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಉತ್ತರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.