ವಿಶ್ವಸಂಸ್ಥೆ: ಫೆಬ್ರುವರಿ 6ರಂದು ಅಂತರರಾಷ್ಟ್ರೀಯ ಎಫ್ಜಿಎಂ ವಿರೋಧಿ ದಿನವಾಗಿದ್ದು, ಮಹಿಳೆಯರ ಮೇಲೆ ನಡೆಯುತ್ತಿರುವ ಈ ಕ್ರೂರ ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.
ಹೆಣ್ಣಿನ ಜನನಾಂಗದ ಛೇದನ (ಫೀಮೇಲ್ ಜೆನೈಟಲ್ ಮ್ಯುಟಿಲೇಷನ್ –ಎಫ್ಜಿಎಂ/FGM =Female Genital Mutilation) ಮಾಡುವ ಆಚರಣೆಗೆ ತಡೆಯೊಡ್ಡುವ ನಿಟ್ಟಿನಲ್ಲಿ ಈ ದಿನ ಆಚರಿಸಲಾಗುತ್ತಿದೆ.
ಈ ಪದ್ಧತಿ ಹಲವೆಡೆ ಇಂದಿಗೂ ಇದ್ದು, ಜಾಗತಿಕವಾಗಿ ಕನಿಷ್ಠ 20 ಕೋಟಿ ಜನ ಹುಡುಗಿಯರು ಮತ್ತು ಮಹಿಳೆಯರು ಜನನಾಂಗದ ಊನಗೊಳಿಸುವಿಕೆಯ ಎಫ್ಜಿಎಂನಂಥ ಆಚರಣೆಗೆ ಒಳಗಾಗಿದ್ದಾರೆ. ಪ್ರಸ್ತುತ ಇದೇ ಪ್ರವೃತ್ತಿ ಮುಂದುವರಿದರೆ 2030ರ ವೇಳೆಗೆ 1.5 ಕೋಟಿಗೂ ಹೆಚ್ಚು ಹುಡುಗಿಯರು ಈ ಆಚರಣೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಎಫ್ಜಿಎಂ ಅಂತ್ಯಗೊಳಿಸಲು ನಿಮ್ಮ ಧ್ವನಿ ಎತ್ತಿ ಎಂದು ವಿಶ್ವಸಂಸ್ಥೆ #endFGM ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.