ADVERTISEMENT

ದುಬೈ: ಮೊದಲ ಹಿಂದೂ ದೇವಾಲಯಕ್ಕೆ ಮೋದಿ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 9:25 IST
Last Updated 11 ಫೆಬ್ರುವರಿ 2018, 9:25 IST
ದುಬೈ: ಮೊದಲ ಹಿಂದೂ ದೇವಾಲಯಕ್ಕೆ ಮೋದಿ ಶಿಲಾನ್ಯಾಸ
ದುಬೈ: ಮೊದಲ ಹಿಂದೂ ದೇವಾಲಯಕ್ಕೆ ಮೋದಿ ಶಿಲಾನ್ಯಾಸ   

ದುಬೈ: ನಾಲ್ಕು ದೇಶಗಳ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದುಬೈನಲ್ಲಿ ಭಾನುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಹಿಂದೂ ದೇವಾಲಯಕ್ಕೆ ಶಿಲಾನ್ಯಾಸ ಮಾಡಿದರು.

ಅಬುಧಾಬಿ-ದುಬೈ ರಾಷ್ಟ್ರಿಯ ಹೆದ್ದಾರಿಯಲ್ಲಿ ಭವ್ಯವಾದ ಸ್ವಾಮಿನಾರಾಯಣ ದೇವಾಲಯ ನಿರ್ಮಾಣವಾಗುತ್ತಿದೆ. ಇದು ದುಬೈನಲ್ಲಿನ ಮೊದಲ ಹಿಂದೂ ದೇವಾಲಯವಾಗಿದೆ. ಈ ದೇವಾಲಯ ನಿರ್ಮಾಣಕ್ಕೆ ಇಲ್ಲಿನ ಸರ್ಕಾರ ಅನುಮತಿ ನೀಡಿದೆ.

ಶಿಲಾನ್ಯಾಸ ನೆರವೇರಿಸಿದ ಬಳಿಕ ಇಲ್ಲಿನ ಒಪೆರಾ ಹಾಲ್‌ನಲ್ಲಿ ಭಾರತೀಯರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ತಮ್ಮ ಭಾಷಣದಲ್ಲಿ ನೋಟು ರದ್ಧತಿ ಮತ್ತು ಜಿಎಸ್‌ಟಿ ಬಗ್ಗೆ ಪ್ರಸ್ತಾಪಿಸಿದರು. ‘ನಾನು ನೋಟು ರದ್ದು ಮಾಡಿದಾಗ ಬಡವರು ಅರ್ಥಮಾಡಿಕೊಂಡು ಸಹಕರಿಸಿದರು. ಆದರೆ ಅಂದು ನಿದ್ದೆ ಕಳೆದುಕೊಂಡವರು ಎರಡು ವರ್ಷಗಳಾದ ಮೇಲೂ ಕಣ್ಣೀರು ಹಾಕುತ್ತಿದ್ದಾರೆ ಎಂದರು.

ADVERTISEMENT

ಭಾರತ ಏಷ್ಯಾದಲ್ಲೇ ಬಲಿಷ್ಠ ದೇಶ ಎಂದು ಕರೆಸಿಕೊಳ್ಳಬೇಕಾದರೆ ನಿಮ್ಮ ಸಹಕಾರವು ಅಗತ್ಯವಿದೆ ಎಂದರು. ಸದಾ ಪ್ರಗತಿಗೆ ನೆರವಾಗುವಂತೆ ಮೋದಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.