ADVERTISEMENT

‘ರಾಜಕೀಯ ಜೀವನ ಮುಗಿಸಲು ಸಂಚು’

ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಆರೋಪ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST
ನವಾಜ್‌ ಷರೀಫ್‌
ನವಾಜ್‌ ಷರೀಫ್‌   

ಇಸ್ಲಾಮಾಬಾದ್‌ : ‘ನನ್ನ ರಾಜಕೀಯ ಜೀವನವನ್ನು ಕೊನೆಗಾಣಿಸಲು ಯತ್ನಗಳು ನಡೆದಿವೆ’ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಆರೋಪಿಸಿದ್ದಾರೆ.

ಸಂವಿಧಾನದ 62 ಹಾಗೂ 63ನೇ ವಿಧಿ ಪ್ರಕಾರ ಅನರ್ಹಗೊಂಡ ವ್ಯಕ್ತಿ ರಾಜಕೀಯ ಪಕ್ಷದ ಮುಖ್ಯಸ್ಥರ ಹುದ್ದೆ ನಿಭಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಆದೇಶ ನೀಡಿತ್ತು.

ಆದೇಶದ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್‌ ಆದೇಶ ಇದೇ ರೀತಿ ಬರಬಹುದು ಎಂದು ಮೊದಲೇ ನಿರೀಕ್ಷಿಸಿದ್ದೆ. ಮೊದಲು ಪ್ರಧಾನಿ ಹುದ್ದೆಯಿಂದ ಕೆಳಗಳಿಸಿದರು. ಈಗ ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌ ಪಕ್ಷದ ಮುಖ್ಯಸ್ಥನ ಸ್ಥಾನವನ್ನೂ ಕಸಿದುಕೊಂಡರು’ ಎಂದು ಹೇಳಿದರು.

ADVERTISEMENT

ಟಿಕೆಟ್‌ ಹಂಚಿಕೆ: ಸದ್ಯದಲ್ಲೇ ನಡೆಯಲಿರುವ ಸೆನೆಟ್ ಚುನಾವಣೆಗೆ ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌ ಅಭ್ಯರ್ಥಿಗಳಿಗೆ ಹೊಸದಾಗಿ ಟಿಕೆಟ್‌ಗಳನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.