ವ್ಯಾಟಿಕನ್ ಸಿಟಿ (ಐಎಎನ್‌ಎಸ್): 16ನೇ ಪೋಪ್ ಬೆನ್‌ಡಿಕ್ಟ್ ಸೋಮವಾರ ತಮ್ಮ 85ನೇ ಜನ್ಮದಿನ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ 88 ವರ್ಷದ ಹಿರಿಯ ಸಹೋದರ ಫಾದರ್ ಜಾರ್ಜ್ ರ‌್ಯಾಟಜಿಂಗರ್ ಅವರನ್ನು ಭೇಟಿ ಮಾಡಿದ ಪೋಪ್, ವಿಶ್ವದ 1.2 ಶತಕೋಟಿಯಷ್ಟಿರುವ ಕ್ಯಾಥೋಲಿಕ್ ಸಮುದಾಯವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯವನ್ನು ನೀಡುವಂತೆ ಪ್ರಾರ್ಥಿಸಲು ಕೋರಿದರು.
ಬೆನ್‌ಡಿಕ್ಟ್ ಪೋಪ್ ಎಂದು ಚುನಾಯಿತರಾದ 7ನೇ ವರ್ಷಾಚರಣೆಯನ್ನು ಸಹ ಚರ್ಚ್ ಗುರುವಾರ ಆಚರಿಸಲಿದೆ. `ಧರ್ಮಪ್ರಚಾರಕ್ಕೆ ನನ್ನನ್ನು ತೊಡಗಿಸಿಕೊಳ್ಳಲು ದೇವರು ಮತ್ತಷ್ಟು ಶಕ್ತಿ ನೀಡಲಿ~ ಎಂದು ಪೋಪ್ ಈ ಸಂದರ್ಭದಲ್ಲಿ ಇಲ್ಲಿಯ ಸೇಂಟ್ ಪೀಟರ್ ವೃತ್ತದಲ್ಲಿ ನಡೆದ ಸಭೆಯಲ್ಲಿ ಸಾವಿರಾರು ಅನುಯಾಯಿಗಳಿಗೆ ಸಂದೇಶ ನೀಡಿದರು.
ಕಳೆದ 109 ವರ್ಷಗಳಲ್ಲಿ ಬೆನ್‌ಡಿಕ್ಟ್ ಅತಿ ಹಳೆಯ ಪೋಪ್ ಆಗಿದ್ದು, ಇದಕ್ಕೂ ಮೊದಲಿನ 13ನೇ ಪೋಪ್ ಲಿಯೋ 93 ವರ್ಷ ಬದುಕಿದ್ದು 1903 ರಲ್ಲಿ ನಿಧನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.