ADVERTISEMENT

ಚೀನಾ ಪಟಾಕಿ ಸ್ಥಾವರದಲ್ಲಿ ಸ್ಫೋಟ: 9 ಸಾವು 

ಪಿಟಿಐ
Published 17 ಜೂನ್ 2025, 12:34 IST
Last Updated 17 ಜೂನ್ 2025, 12:34 IST
-
-   

ಬೀಜಿಂಗ್‌: ಚೀನಾದ ಹುನಾನ್‌ ಪ್ರಾಂತ್ಯದ ಲಿನ್‌ಲಿ  ಕೌಂಟಿಯಲ್ಲಿರುವ ಪಟಾಕಿ ಘಟಕವೊಂದರಲ್ಲಿ ಸ್ಫೋಟ ಸಂಭವಿಸಿದೆ. ದುರಂತದಲ್ಲಿ 9 ಮಂದಿ ಮೃತಪಟ್ಟಿದ್ದು, 26 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಘಟನಾ ಸ್ಥಳದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಘಟನೆಗೆ ಕಾರಣ ಪತ್ತೆ ಮಾಡುವುದಕ್ಕಾಗಿ ತನಿಖಾ ತಂಡವನ್ನೂ ರಚಿಸಲಾಗಿದೆ ಎಂದು ಚೀನಾದ ವಿಪತ್ತು ನಿರ್ವಹಣಾ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT