ADVERTISEMENT

ಪ್ರತ್ಯೇಕ ಅಫಘಾತ: ಭಾರತದ ಇಬ್ಬರ ಸಾವು

ಪಿಟಿಐ
Published 5 ನವೆಂಬರ್ 2019, 17:13 IST
Last Updated 5 ನವೆಂಬರ್ 2019, 17:13 IST
   

ದುಬೈ: ಎರಡು ಪ್ರತ್ಯೇಕ ಅಪಘಾತದಲ್ಲಿ ಭಾರತ ಮೂಲದಮಹಿಳೆ ಮತ್ತು ನಾಲ್ಕು ವರ್ಷದ ಬಾಲಕಿ ಮೃತಪಟ್ಟಿದ್ದಾರೆ ಎಂದು ಖಲೀಜ್‌ ಟೈಮ್ಸ್ ಬುಧವಾರ ವರದಿ ಮಾಡಿದೆ.

ಮಹಿಳೆ ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ಇವರ 17 ವರ್ಷ ವಯಸ್ಸಿನ ಮಗನೇ ಕಾರು ಅಪಘಾತ ಮಾಡಿದ್ದು, ಈತ ವಾಹನ ಚಾಲನಾ ಪರವಾನಗಿ ಹೊಂದಿರಲಿಲ್ಲ. ಶಾರ್ಜಾದ ಮುವೀಲಾ ಪ್ರದೇಶದ ಉದ್ಯಾನಕ್ಕೆ ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ.ಕಾರನ್ನು ಪಾರ್ಕಿಂಗ್‌ ಮಾಡುವ ವೇಳೆ ಬ್ರೇಕ್‌ ಹಾಕುವ ಬದಲು ಆ‍್ಯಕ್ಸಲರೇಟರ್‌ ಮೇಲೆ ಕಾಲಿರಿಸಿದ್ದರಿಂದ ತಾಯಿಗೆ ಕಾರು ಡಿಕ್ಕಿ ಹೊಡೆದಿದೆ.

ಇದೇ ಮಾದರಿಯ ಮತ್ತೊಂದು ಅಪಘಾತಜೆಬೆಲ್‌ ಆಲಿ ಪ್ರದೇಶದಲ್ಲಿ ನಡೆದಿದೆ. ಬಾಲಕಿ (4) ಮೃತಪಟ್ಟು, ತಾಯಿ ಗಾಯಗೊಂಡಿದ್ದಾರೆ. ಅಪಘಾತ ನಡೆಸಿದವನನ್ನು ಆಫ್ರಿಕಾ ಮೂಲದವ ಎಂದು ಗುರುತಿಸಲಾಗಿದೆ.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.