ADVERTISEMENT

ಕಾಬೂಲ್‌ನಿಂದ ಮತ್ತೆ ವಿಮಾನ ಸಂಚಾರ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 19:33 IST
Last Updated 13 ಸೆಪ್ಟೆಂಬರ್ 2021, 19:33 IST
   

ಕಾಬೂಲ್‌ (ಎಪಿಎಫ್‌): ಪಾಕಿಸ್ತಾನದ ಅಂತರರಾಷ್ಟ್ರೀಯ ವಿಮಾನವೊಂದು ಸೋಮವಾರ ಬೆಳಿಗ್ಗೆ ಕಾಬೂಲ್‌ ವಿಮಾನ ನಿಲ್ದಾಣದಿಂದ ಸುಮಾರು 70 ಪ್ರಯಾಣಿಕರನ್ನು ಹೊತ್ತು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ತೆರಳಿತು. ಅಫ್ಗಾನಿಸ್ತಾನವು ತಾಲಿಬಾನ್‌ ವಶವಾದ ಬಳಿಕ ಈ ವಿಮಾನ ನಿಲ್ದಾಣದಿಂದ ಹೊರಕ್ಕೆ ಹೋದ ಮೊದಲ ನಾಗರಿಕ ವಿಮಾನ ಇದು.

ವಿಮಾನದಲ್ಲಿ ಪಾಕಿಸ್ತಾನಕ್ಕೆ ತೆರಳಿದವರಲ್ಲಿ ಬಹುತೇಕರು ಅಫ್ಗನ್ನರು. ಅವರಲ್ಲಿ ಹಲವರು ವಿಶ್ವ ಬ್ಯಾಂಕ್‌, ಮತ್ತಿತರ ಸಂಸ್ಥೆಗಳ ಉದ್ಯೋಗಿಗಳ ಸಂಬಂಧಿಗಳು ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಹೇಳಿದ್ದಾರೆ.

ಪಾಕಿಸ್ತಾನ ಅಂತರರಾಷ್ಟ್ರೀಯ ವಿಮಾನಗಳು ಅಫ್ಗಾನಿಸ್ತಾನಕ್ಕೆ ಎಂದಿನ ವಾಣಿಜ್ಯ ಸೇವೆ ಆರಂಭಿಸಿವೆ. ಆದರೆ ಎಷ್ಟು ಅವಧಿಯ ಅಂತರದಲ್ಲಿ ಎರಡು ದೇಶಗಳ ರಾಜಧಾನಿಗಳ ಮಧ್ಯೆ ವಿಮಾನ ಓಡಾಡಲಿದೆ ಎಂದು ಹೇಳಲು ಇದು ಸಮಯವಲ್ಲ ಎಂದು ಪಾಕಿಸ್ತಾನದ ವಿಮಾನ ಯಾನ ಸಂಸ್ಥೆಯೊಂದರ ವಕ್ತಾರರೊಬ್ಬರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.