ADVERTISEMENT

ಅಫ್ಗಾನಿಸ್ತಾನ: ಪ್ರವಾಹಕ್ಕೆ ಸಿಲುಕಿ 40 ಮಂದಿ ಸಾವು, ಹಲವರು ನಾಪತ್ತೆ

ರಾಯಿಟರ್ಸ್
Published 29 ಜುಲೈ 2021, 11:18 IST
Last Updated 29 ಜುಲೈ 2021, 11:18 IST
ಅಫ್ಗಾನಿಸ್ತಾನದಲ್ಲಿ ಪ್ರವಾಹದಿಂದಾಗಿ ಕೆಸರು ತುಂಬಿರುವ ದೃಶ್ಯ –ರಾಯಿಟರ್ಸ್‌ ಚಿತ್ರ
ಅಫ್ಗಾನಿಸ್ತಾನದಲ್ಲಿ ಪ್ರವಾಹದಿಂದಾಗಿ ಕೆಸರು ತುಂಬಿರುವ ದೃಶ್ಯ –ರಾಯಿಟರ್ಸ್‌ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದ ತಾಲಿಬಾನ್ ನಿಯಂತ್ರಿತ ಪ್ರದೇಶದಲ್ಲಿ ಉಂಟಾದ ಪ್ರವಾಹದಿಂದಾಗಿ 40 ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಗಾನಿಸ್ತಾನದ ಪೂರ್ವ ಪ್ರಾಂತ್ಯ ನುರಿಸ್ತಾನದ ಕಾಮ್ದೇಶ್‌ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ. ಈ ಪ್ರದೇಶ ತಾಲಿಬಾನ್ ಉಗ್ರರ ನಿಯಂತ್ರಣದಲ್ಲಿದ್ದು, ದೂರಸಂಪರ್ಕ ವ್ಯವಸ್ಥೆ ಅಸಮರ್ಪಕವಾಗಿದೆ. ನಿಖರವಾದ ಮಾಹಿತಿ ಕಲೆಹಾಕುವುದಕ್ಕೆ ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಮೂಲಗಳ ಪ್ರಕಾರ 60 ಮನೆಗಳು ನಾಶವಾಗಿದ್ದು, 100ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ’ ಎಂದು ವಿಪತ್ತು ನಿರ್ವಹಣಾ ಸಚಿವಾಲಯದ ವಕ್ತಾರ ಸಮೀವುಲ್ಲಾ ಜರ್ಬಿ ಹೇಳಿದ್ದಾರೆ.

ಕಾಣೆಯಾದವರನ್ನು ಹುಡುಕಲು ತಾಲಿಬಾನಿಗಳು ಗ್ರಾಮಸ್ಥರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.