ADVERTISEMENT

ಅಫ್ಗಾನ್‌: ವಿದ್ಯಾರ್ಥಿನಿಯರಿಗೆ ಪ್ರವೇಶ ನಿಷೇಧ

ಏಜೆನ್ಸೀಸ್
Published 20 ಮಾರ್ಚ್ 2024, 11:32 IST
Last Updated 20 ಮಾರ್ಚ್ 2024, 11:32 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಇಸ್ಲಾಮಾಬಾದ್‌: ‘ಅಫ್ಗಾನಿಸ್ತಾನದಲ್ಲಿ ಬುಧವಾರದಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಆರನೇ ತರಗತಿ ಬಳಿಕ ಹೆಣ್ಣುಮಕ್ಕಳ ಪ್ರವೇಶಾತಿಯನ್ನು ನಿಷೇಧಿಸಿರುವುದರಿಂದ 10 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ವಿಭಾಗ ಹೇಳಿದೆ.

‘ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ಸೌಲಭ್ಯಗಳ ಕೊರತೆ ಮತ್ತು ಇತರ ಕಾರಣಗಳಿಂದಾಗಿ 50 ಲಕ್ಷ‌ಕ್ಕೂ ಹೆಚ್ಚು ಹೆಣ್ಣುಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದರು’ ಎಂದು ಅದು ಅಂದಾಜಿಸಿದೆ.

ADVERTISEMENT

ಮಹಿಳಾ ಪತ್ರಕರ್ತರ ಉಪಸ್ಥಿತಿಗೆ ಅವಕಾಶ ನೀಡದೆಯೇ ಶೈಕ್ಷಣಿಕ ವರ್ಷ ಆರಂಭದ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ಬರುವಂತೆ ಪತ್ರಕರ್ತರಿಗೆ ಕಳುಹಿಸಿದ್ದ ಆಹ್ವಾನ ಪತ್ರಿಕೆಯಲ್ಲಿ, ‘ನಮ್ಮ ಸಹೋದರಿಯರಿಗೆ ಸೂಕ್ತ ಸ್ಥಳದ ಕೊರತೆಯಿದೆ. ಆದ್ದರಿಂದ ನಾವು ಅವರಲ್ಲಿ ಕ್ಷಮೆ ಯಾಚಿಸುತ್ತೇವೆ’ ಎಂದು ಸರ್ಕಾರ ಹೇಳಿತ್ತು.

‘ಧಾರ್ಮಿಕ ಮತ್ತು ಆಧುನಿಕ ವಿಜ್ಞಾನಗಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಲು ಶಿಕ್ಷಣ ಸಚಿವಾಲಯವು ಸಾಧ್ಯವಾದಷ್ಟು ಯತ್ನಿಸುತ್ತಿದೆ. ಇಸ್ಲಾಂಗೆ ಹಾಗೂ ಅಫ್ಗಾನಿಸ್ತಾನದ ತತ್ವಗಳಿಗೆ ವಿರುದ್ಧವಾದ ದಿರಿಸನ್ನು ವಿದ್ಯಾರ್ಥಿಗಳು ಧರಿಸಬಾರದು’ ಎಂದು ಶೈಕ್ಷಣಿಕ ವರ್ಷ ಆರಂಭದ ಸಮಾರಂಭದಲ್ಲಿ ತಾಲಿಬಾನ್‌ ಶಿಕ್ಷಣ ಸಚಿವ ಹಬಿಬುಲ್ಲಾ ಅಘಾ ಕರೆ ನೀಡಿದ್ದಾರೆ.

‘ರಾಷ್ಟ್ರದ ಎಲ್ಲ ಕುಗ್ರಾಮಗಳಿಗೂ ಶಿಕ್ಷಣ ಸೌಲಭ್ಯವನ್ನು ವಿಸ್ತರಿಸುವ ಪ್ರಯತ್ನವನ್ನು ತಾಲಿಬಾನ್‌ ಆಡಳಿತ ಮಾಡುತ್ತಿದೆ’ ಎಂದು ಅಫ್ಗಾನಿಸ್ತಾನದ ಉಪ‍ ಪ್ರಧಾನಿ ಅಬ್ದುಲ್‌ ಸಲಾಮ್‌ ಹನಾಫಿ ಅವರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.