ADVERTISEMENT

ಸೇನೆ ಮೇಲೆ ದಾಳಿ

ಏಜೆನ್ಸೀಸ್
Published 5 ಜನವರಿ 2020, 19:45 IST
Last Updated 5 ಜನವರಿ 2020, 19:45 IST

ನೈರೋಬಿ: ಸೊಮಾ ಲಿಯಾದಲ್ಲಿ ಅಲ್ ಶಬಾಬ್‌ ಗುಂಪಿಗೆ ಸೇರಿದ ಜಿಹಾದಿಗಳು ಭಾನುವಾರ ಅಮೆರಿಕ ಮತ್ತು ಕೆನ್ಯಾದ ಸೇನಾ ಪಡೆಗಳ ಮೇಲೆ ಕೆನ್ಯಾ ತೀರದ ಲಮು ವಲಯದಲ್ಲಿ ದಾಳಿ ನಡೆಸಿದ್ದಾರೆ. ಅಲ್ಲಿನ ಸಿಂಬಾ ಶಿಬಿರದ ಮೇಲೆ ದಾಳಿ ನಡೆದಿದೆ.

ಕೆನ್ಯಾದ ಸೇನಾ ವಕ್ತಾರ ಕರ್ನಲ್‌ ಪಾಲ್‌ ಜುಗುನ ಅವರು ಈ ಕುರಿತ ಹೇಳಿಕೆಯಲ್ಲಿ, ಮಂಡಾ ನಿಲ್ದಾಣದಲ್ಲಿಭದ್ರತೆ ಉಲ್ಲಂಘಿಸುವ ಯತ್ನಗಳು ನಡೆದವು. ಇದನ್ನು ಯಶಸ್ವಿಯಾಗಿ ತಡೆಯಲಾಯಿತು. ರನ್‌ವೇ ಸುರಕ್ಷಿತವಾಗಿದ್ದು, ನಾಲ್ವರು ಉಗ್ರರ ದೇಹ ಪತ್ತೆಯಾಗಿದೆ. ದಾಳಿಯಿಂದ ನಿಲ್ದಾಣದಲ್ಲಿ ಬೆಂಕಿಹೊತ್ತಿಕೊಂಡಿದ್ದು, ಕೆಲ ಇಂಧನ ಸಂಗ್ರಹಕಾರಗಳಿಗೆ ಧಕ್ಕೆಯಾಗಿದೆ’ ಎಂದಿದ್ದಾರೆ.

ದಾಳಿ ಹೊಣೆಯನ್ನು ಅಲ್‌ ಶಬಾಬ್‌ ಹೊತ್ತಿಕೊಂಡಿದೆ. ಈ ಕುರಿತು ಹೇಳಿಕೆ ನೀಡಿದ್ದು, ‘ಯಶಸ್ವಿಯಾಗಿ ನಾವು ಸೇನಾನೆಲೆಯ ಮೇಲೆ ದಾಳಿ ನಡೆಸಿದ್ದೇವೆ. ಭಾಗಶಃ ಹಿಡಿತಕ್ಕೆ ತೆಗೆದುಕೊಂಡಿದ್ದೇವೆ’ ಎಂದು ತಿಳಿಸಿದೆ.

ADVERTISEMENT

ಸೊಮಾಲಿಯಾದ ಜಿಹಾದಿಗಳು ಕೆನ್ಯಾದಲ್ಲಿ ಅನೇಕ ಬಾರಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದ್ದಾರೆ. ಸೊಮಾಲಿಯಾಗೆ ಸೇನೆಯನ್ನು ಕಳುಹಿಸಿದ್ದ ನೈರೋಬಿಯ ಕ್ರಮಕ್ಕೆ ಪ್ರತಿಕಾರವಾಗಿ ಈ ದಾಳಿ ನಡೆದಿದೆ. ಡಿಸೆಂಬರ್ 28ರಂದು ನಡೆಸಿದ್ದ ದಾಳಿಯಲ್ಲಿ 81 ಜನ ಸತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.