ADVERTISEMENT

ದಕ್ಷಿಣ ಆಫ್ರಿಕಾ: ಫೆಡ್ಡಿ ಚಂಡಮಾರುತದಿಂದ 44 ಮಂದಿ ಸಾವು

ಏಜೆನ್ಸೀಸ್
Published 13 ಮಾರ್ಚ್ 2023, 15:58 IST
Last Updated 13 ಮಾರ್ಚ್ 2023, 15:58 IST
ರಭಸವಾಗಿ ಬೀಸುತ್ತಿರುವ ಫೆಡ್ಡಿ ಚಂಡಮಾರುತದ ಗಾಳಿಗೆ ಬಾಗಿರುವ ಮರಗಳು 
ರಭಸವಾಗಿ ಬೀಸುತ್ತಿರುವ ಫೆಡ್ಡಿ ಚಂಡಮಾರುತದ ಗಾಳಿಗೆ ಬಾಗಿರುವ ಮರಗಳು    

ಬ್ಲಾಂಟೈರ್‌, ಮಲಾವಿ (ಎಪಿ): ದಕ್ಷಿಣ ಆಫ್ರಿಕಾವನ್ನು ಜರ್ಜರಿತಗೊಳಿಸಿರುವ ಫೆಡ್ಡಿ ಚಂಡಮಾರುತವು ಮಲಾವಿ ಮತ್ತು ಮೊಜಾಂಬಿಕ್‌ಗೆ ಶನಿವಾರ ರಾತ್ರಿ ಎರಡನೇ ಬಾರಿ ಅಪ್ಪಳಿಸಿದ್ದು, ಇಲ್ಲಿಯವರೆಗೆ ಕನಿಷ್ಠ 44 ಮಂದಿಯನ್ನು ಬಲಿ ತೆಗೆದುಕೊಂಡಿದೆ ಎಂದು ಎರಡೂ ದೇಶಗಳ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಮಲಾವಿಯ ವಾಣಿಜ್ಯ ನಗರ ಬ್ಲಾಂಟೈರ್‌ನಲ್ಲಿ ಕನಿಷ್ಠ 39 ಮಂದಿ ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ ಮತ್ತು ಕಾಣೆಯಾಗಿದ್ದಾರೆ ಎಂದು ನಗರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮವಾರ ಮಾಧ್ಯಮವರಿಗೆ ತಿಳಿಸಿದ್ದಾರೆ. ಜೊತೆಗೆ ಮೊಜಾಂಬಿಕ್‌ನಲ್ಲಿ ಶನಿವಾರದಿಂದ ಇಲ್ಲಿಯವರೆಗೆ ಐದು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.