ADVERTISEMENT

ಕೆನ್ಯಾ ರಾಜಧಾನಿಯಲ್ಲಿ ಅನಿಲ ಸ್ಫೋಟ: ಕನಿಷ್ಠ ಇಬ್ಬರು ಸಾವು, 165 ಜನರಿಗೆ ಗಾಯ

ರಾಯಿಟರ್ಸ್
Published 2 ಫೆಬ್ರುವರಿ 2024, 3:00 IST
Last Updated 2 ಫೆಬ್ರುವರಿ 2024, 3:00 IST
<div class="paragraphs"><p>ಕೆನ್ಯಾದ ರಾಜಧಾನಿ ನೈರೋಬಿಯಲ್ಲಿ ಅನಿಲ ಸ್ಫೋಟ ಸಂಭವಿಸಿದ&nbsp;ಸ್ಥಳ</p></div>

ಕೆನ್ಯಾದ ರಾಜಧಾನಿ ನೈರೋಬಿಯಲ್ಲಿ ಅನಿಲ ಸ್ಫೋಟ ಸಂಭವಿಸಿದ ಸ್ಥಳ

   

ರಾಯಿಟರ್ಸ್‌ ಚಿತ್ರ

ನೈರೋಬಿ: ಕೆನ್ಯಾದ ರಾಜಧಾನಿ ನೈರೋಬಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಿಂದಾಗಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, 165ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ಶುಕ್ರವಾರ ವರದಿ ಮಾಡಿದೆ.

ADVERTISEMENT

ನೈರೋಬಿ ನೆರೆಯ ಎಂಬಾಕಸಿಯಲ್ಲಿ ಸಿಲಿಂಡರ್‌ಗಳಿಗೆ ಅನಿಲ ಭರ್ತಿಮಾಡುವ ಸಂಸ್ಥೆಯಲ್ಲಿ ಮಧ್ಯರಾತ್ರಿ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಅವಘಡದಿಂದಾಗಿ ಕಟ್ಟಡಕ್ಕೂ ಭಾರಿ ಹಾನಿಯಾಗಿದೆ ಎಂದು ಸರ್ಕಾರದ ವಕ್ತಾರ ಐಸಾಕ್‌ ಮೌರಾ ಎಕ್ಸ್‌/ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

ಘಟನೆ ವೇಳೆ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ ಎಂದು ಎಂಬಾಕಸಿ ಪೊಲೀಸ್‌ ಅಧಿಕಾರಿ ವೆಸ್ಲೀ ಕಿಮೆಟೊ ಖಚಿತಪಡಿಸಿದ್ದಾರೆ.

ಕನಿಷ್ಠ 165 ಜನರು ಗಾಯಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ನೈರೋಬಿ ಪೊಲೀಸ್‌ ಅಧಿಕಾರಿ ಅ್ಯಡಮ್ಸನ್‌ ಬಂಗೈ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.