ADVERTISEMENT

ಬಾಂಗ್ಲಾದೇಶದ ಸುವರ್ಣ ಸ್ವಾತಂತ್ರ್ಯ ಮಹೋತ್ಸವ ಆರಂಭ

ಪಿಟಿಐ
Published 17 ಮಾರ್ಚ್ 2021, 11:43 IST
Last Updated 17 ಮಾರ್ಚ್ 2021, 11:43 IST
ಶೇಖ್‌ ಮುಜಿಬುರ್‌ ರಹಮಾನ್ ಕಟೌಟ್
ಶೇಖ್‌ ಮುಜಿಬುರ್‌ ರಹಮಾನ್ ಕಟೌಟ್   

ಢಾಕಾ: ಬಾಂಗ್ಲಾದೇಶದ 10 ದಿನಗಳ ಸುವರ್ಣ ಸ್ವಾತಂತ್ರ್ಯ ಮಹೋತ್ಸವ ಮತ್ತು ರಾಷ್ಟ್ರಪಿತ ಬಂಗಬಂಧು ಶೇಖ್‌ ಮುಜಿಬುರ್‌ ರಹಮಾನ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವು ಬುಧವಾರ ಆರಂಭಗೊಂಡಿದೆ.

ಸುವರ್ಣ ಸ್ವಾತಂತ್ರ್ಯ ಮಹೋತ್ಸವವು 27 ರ ತನಕ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ನೇಪಾಳ, ಶ್ರೀಲಂಕಾ, ಭೂತಾನ್‌ ಹಾಗೂ ಮಾಲ್ಡೀವ್ಸ್‌ನ ಉನ್ನತ ನಾಯಕರು ಭಾಗವಹಿಸಲಿದ್ದಾರೆ. ಇತರೆ ವಿಶ್ವ ನಾಯಕರನ್ನು ಈ ಮಹೋತ್ಸವಕ್ಕೆ ಆಹ್ವಾನಿಸಲಾಗಿದೆ.

ಮಾಲ್ಡೀವ್ಸ್‌ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ ಸೊಲಿಹ್‌ ಅವರುಬುಧವಾರ ಢಾಕಾಗೆ ಬಂದಿಳಿದಿದ್ದು, ಅವರನ್ನು ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್‌ ಹಮೀದ್‌ ಅವರು ಸ್ವಾಗತಿಸಿದರು. ಬಳಿಕ ಉಭಯ ನಾಯಕರು ರಾಷ್ಟ್ರೀಯ ಸ್ಮಾರಕಕ್ಕೆ ಭೇಟಿ ನೀಡಿ,1971ರ ಹುತಾತ್ಮರಿಗೆ ಗೌರವ ಸಲ್ಲಿಸಿದರು.

ADVERTISEMENT

1971ರ ವಿಮೋಚನಾ ಯುದ್ಧದ ಬಳಿಕಬಾಂಗ್ಲಾದೇಶವು ಪಾಕಿಸ್ತಾನದಿಂದ ಸ್ವಾತಂತ್ರ್ಯವನ್ನು ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.