ADVERTISEMENT

ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನ ಪತನ: ಮೃತರ ಸಂಖ್ಯೆ 27ಕ್ಕೆ ಏರಿಕೆ

ಪಿಟಿಐ
Published 22 ಜುಲೈ 2025, 13:44 IST
Last Updated 22 ಜುಲೈ 2025, 13:44 IST
ಢಾಕಾದ ಶಿಕ್ಷಣ ಸಂಸ್ಥೆಯ ಮೇಲೆ ಪತನಗೊಂಡ ಯುದ್ಧ ವಿಮಾನದಿಂದ ಮೃತಪಟ್ಟವರ ನಿಖರ ಸಂಖ್ಯೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು–ಎಎಫ್‌ಪಿ ಚಿತ್ರ
ಢಾಕಾದ ಶಿಕ್ಷಣ ಸಂಸ್ಥೆಯ ಮೇಲೆ ಪತನಗೊಂಡ ಯುದ್ಧ ವಿಮಾನದಿಂದ ಮೃತಪಟ್ಟವರ ನಿಖರ ಸಂಖ್ಯೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು–ಎಎಫ್‌ಪಿ ಚಿತ್ರ   

ಢಾಕಾ: ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನ ಶಾಲಾ ಕಟ್ಟಡದ ಮೇಲೆ ಪತನಗೊಂಡು ಮೃತಪಟ್ಟವರ ಸಂಖ್ಯೆ 27ಕ್ಕೇರಿದೆ.

ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 7 ಮಂದಿ ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸೋಮವಾರ ‌ಮಧ್ಯಾಹ 1:06ಕ್ಕೆ ಟೇಕ್‌ಆಫ್‌ ಆದ ಎಫ್‌–7 ಬಿಜಿಐ ತರಬೇತಿ ವಿಮಾನವು, ಢಾಕಾ ಸಮೀಪದ ಉತ್ತರಾ ಪ್ರದೇಶದಲ್ಲಿನ ಮೈಲ್‌ಸ್ಟೋನ್‌ ಶಾಲೆ ಮತ್ತು ಕಾಲೇಜು ಆವರಣದಲ್ಲಿನ ಎರಡು ಮಹಡಿಯ ಕಟ್ಟಡಕ್ಕೆ ಅಪ್ಪಳಿಸಿತ್ತು.

ADVERTISEMENT

‘ಮೃತರಲ್ಲಿ 25 ಮಂದಿ ಮಕ್ಕಳು ಸೇರಿದ್ದಾರೆ’ ಎಂದು ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನಸ್‌ ಅವರ ವಿಶೇಷ ಸಲಹೆಗಾರ ಸೈದುರ್ ರೆಹಮಾನ್‌ ತಿಳಿಸಿದರು.

‘ಮೃತಪಟ್ಟವರಲ್ಲಿ ಬಹುತೇಕ ಮಕ್ಕಳು 12 ವರ್ಷದ ಒಳಗಿನವರು. 20 ಮಂದಿಯ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಅವರು ತಿಳಿಸಿದರು.

‘ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲ ರೀತಿಯ ಚಿಕಿತ್ಸೆ ಒದಗಿಸಲು ಸರ್ಕಾರ ಯತ್ನಿಸುತ್ತಿದೆ’ ಎಂದರು.

ವಿಮಾನ ದುರಂತದಿಂದ 170 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ವಿಮಾನದ ಪೈಲಟ್‌ ಲೆಫ್ಟಿನೆಂಟ್‌ ಮೊಹಮ್ಮದ್‌ ತೌಕೀರ್‌ ಇಸ್ಲಾಮ್‌ ಕೂಡ ಸೇರಿದ್ದಾರೆ.

ವಿಮಾನ ಪತನಗೊಂಡ ಸ್ಥಳದಲ್ಲಿ ವಾಯುಸೇನಾ ಅಧಿಕಾರಿಗಳು ಮಂಗಳವಾರ ಪರಿಶೀಲನೆ ನಡೆಸಿದರು–ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.