ಮಾಸ್ಕೊ (ಎಎಫ್‌ಪಿ): ಬೆಲಾರಸ್‌ನ ಪ್ರಮುಖ ವಿರೋಧ ಪಕ್ಷದ ನಾಯಕಿ
ಯರಿಗೆ ದೀರ್ಘಕಾಲದ ಜೈಲುಶಿಕ್ಷೆ ವಿಧಿಸಿ ಬೆಲಾರಸ್ ನ್ಯಾಯಾಲಯವು ಆದೇಶಿಸಿದೆ. 2020ರಲ್ಲಿ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ವಿರುದ್ಧ ಪ್ರತಿಭಟನೆ ನಡೆಸಿದ್ದ ಮರಿಯಾ ಕೊಲೆಸ್ನಿಕೋವಾ ಮತ್ತು ಮ್ಯಾಕ್ಸಿಮಾ ಜ್ನಾಕ್ ಅವರಿಗೆ ಕ್ರಮವಾಗಿ 11 ಮತ್ತು 10 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ.
ಬೆಲಾರಸ್‌ನ ಈ ಕ್ರಮದ ವಿರುದ್ಧ ಅಂತರರಾಷ್ಟ್ರೀಯ ಸಮುದಾಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
ಅಧ್ಯಕ್ಷ ಅಲೆಕ್ಸಾಂಡರ್ ಅವರು 1994ರಿಂದಲೂ ಅಧಿಕಾರದಲ್ಲಿದ್ದಾರೆ. ತಮ್ಮ ಅವಧಿ ಮುಗಿದ ನಂತರವೂ ಚುನಾವಣೆ ನಡೆಯಲು ಅವಕಾಶ ನೀಡದೆ, ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಅವರ ವಿರುದ್ಧ ಧ್ವನಿ ಎತ್ತಿದ ವಿರೋಧ ಪಕ್ಷಗಳ ನಾಯಕರನ್ನು ಈ ಹಿಂದೆಯೂ ಜೈಲಿಗೆ ಕಳುಹಿಸಲಾಗಿದೆ ಮತ್ತು ಗಡೀಪಾರು ಮಾಡಲಾಗಿದೆ. ಅಲೆಕ್ಸಾಂಡರ್ ಅವರನ್ನು ಅಧಿಕಾರ
ದಿಂದ ಕೆಳಗೆ ಇಳಿಸಬೇಕು ಎಂದು 2020
ರಲ್ಲಿ ಮರಿಯಾ ಚಳವಳಿ ಆರಂಭಿಸಿದ್ದರು.
ಸರ್ಕಾರದ ವಿರುದ್ಧ ಕ್ರಾಂತಿ ನಡೆಸಿದ ಮತ್ತು ಅಕ್ರಮವಾಗಿ ಅಧಿಕಾರ ಕಸಿದುಕೊಳ್ಳಲು ಯತ್ನಿಸಿದ ಆರೋಪದಲ್ಲಿ ಮರಿಯಾ ಅವರನ್ನು ಬಂಧಿಸಲಾಗಿತ್ತು. 2020ರಲ್ಲೇ ಅವರನ್ನು ದೇಶದಿಂದ ಗಡಿಪಾರು ಮಾಡಲುಬಲವಂತವಾಗಿ ಉಕ್ರೇನ್ ಗಡಿಗೆ ಕರೆದೊಯ್ಯಲಾಗಿತ್ತು. ಆಗ ಮರಿಯಾ ಅವರು ತಮ್ಮ ಪಾಸ್‌ಪೋರ್ಟ್ ಅನ್ನು ಹರಿದುಹಾಕಿದ್ದರು. ಹೀಗಾಗಿ ಅವರ ಪ್ರವೇಶವನ್ನು ಉಕ್ರೇನ್ ನಿರಾಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.