ADVERTISEMENT

ಅಮೆರಿಕ: ಸರೋವರದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳ ಮೃತದೇಹ ಪತ್ತೆ

ಪಿಟಿಐ
Published 23 ಏಪ್ರಿಲ್ 2023, 14:45 IST
Last Updated 23 ಏಪ್ರಿಲ್ 2023, 14:45 IST
.
.   

ನ್ಯೂಯಾರ್ಕ್‌ (ಪಿಟಿಐ): ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿನ ಸರೋವರವೊಂದರಲ್ಲಿ ನಾಪತ್ತೆಯಾಗಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳ ಮೃತದೇಹಗಳು ಪತ್ತೆಯಾಗಿವೆ ಎಂದು ‘ಯುಎಸ್‌ಎ ಟುಡೆ’ ಪತ್ರಿಕೆ ವರದಿ ಮಾಡಿದೆ.

‘ಇದೇ 15ರಂದು ಸಿದ್ದಾರ್ಥ್‌ ಶಾ (19) ಮತ್ತು ಆರ್ಯನ್‌ ವೈದ್ಯ (20) ಎಂಬುವವರು ತಮ್ಮ ಸ್ನೇಹಿತರ ಗುಂಪಿನೊಡನೆ ಇಂಡಿಯಾನಾಪೊಲಿಸ್‌ ಬಳಿಯ ಮನ್ರೊ ಸರೋವರದಲ್ಲಿ ಈಜಲು ಹೋಗಿದ್ದಾಗ ನಾಪತ್ತೆಯಾಗಿದ್ದರು’ ಎಂದು ವರದಿ ಹೇಳಿದೆ.

‘ಸತತ ಮೂರು ದಿನಗಳ ಶೋಧ ಕಾರ್ಯಾಚರಣೆಯ ಬಳಿಕ ಇದೇ 18ರಂದು ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಇಬ್ಬರೂ ವಿದ್ಯಾರ್ಥಿಗಳು ಇಂಡಿಯಾನಾ ವಿಶ್ವವಿದ್ಯಾಲಯದ ಕೆಲ್ಲಿ ಸ್ಕೂಲ್‌ ಆಫ್‌ ಬ್ಯುಸಿನೆಸ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.