ಲಂಡನ್: ಐರೋಪ್ಯ ಒಕ್ಕೂಟ ದಿಂದ ಬ್ರಿಟನ್ ನಿರ್ಗಮಿಸುವ ದಿನ (ಬ್ರೆಕ್ಸಿಟ್ ಒಪ್ಪಂದ ಜಾರಿ) ಹತ್ತಿರವಾಗುತ್ತಿರುವಂತೆಯೇ ಸಂಸತ್ತನ್ನು ಅಮಾನತುಗೊಳಿಸಿರುವಪ್ರಧಾನಿ ಬೋರಿಸ್‌ಜಾನ್ಸನ್ ಅವರ ಕ್ರಮಕಾನೂನುಬಾಹಿರಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಬ್ರೆಕ್ಸಿಟ್ ಅನ್ನು ವಿರೋಧಿಸಿ ಆಂದೋಲನ ನಡೆಸುತ್ತಿರುವ ಭಾರತ ಮೂಲದ ಗಿನಾ ಮಿಲ್ಲರ್, ಪ್ರಧಾನಿಯ ಈ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಅಧ್ಯಕ್ಷೆ ಲೇಡಿ ಬ್ರೆಂಡಾ ಹೇಲ್, ‘ಸಂಸತ್ ಅನ್ನು ಅಮಾನತುಗೊಳಿಸುವಂತೆ ಬ್ರಿಟನ್ ರಾಣಿಗೆ ಸಲಹೆ ನೀಡಿರುವುದು ಕಾನೂನು ಬಾಹಿರ’ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಈ ತೀರ್ಪಿನಿಂದ ಜಾನ್ಸನ್ ಅವರಿಗೆ ಹಿನ್ನಡೆಯಾದಂತಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.