ADVERTISEMENT

ಸುದೀರ್ಘ ಆಳ್ವಿಕೆ ನಡೆಸಿದ ಎರಡನೇ ರಾಜ ವಂಶಸ್ಥೆ: ಎಲಿಜಬೆತ್‌ ರಾಣಿ ದಾಖಲೆ

ಪಿಟಿಐ
Published 12 ಜೂನ್ 2022, 12:36 IST
Last Updated 12 ಜೂನ್ 2022, 12:36 IST
ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌
ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌   

ಲಂಡನ್‌:ಜಗತ್ತಿನಲ್ಲೇ ಅತ್ಯಂತ ಸುದೀರ್ಘ ಆಳ್ವಿಕೆ ನಡೆಸಿದ ಎರಡನೇ ರಾಜ ವಂಶಸ್ಥೆಯಾಗಿ ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ದಾಖಲೆ ನಿರ್ಮಿಸಿದ್ದಾರೆ.

ಫ್ರಾನ್ಸ್‌ನ 14ನೇ ಲೂಯಿಸ್‌ 1643ರಿಂದ 1715ರ ವರೆಗೆ ಒಟ್ಟು 72 ವರ್ಷ 110 ದಿನಗಳ ಕಾಲ ಆಳ್ವಿಕೆ ನಡೆಸಿ, ಜಗತ್ತಿನಲ್ಲಿ ಸುದೀರ್ಘವಾಗಿ ಆಳ್ವಿಕೆ ನಡೆಸಿದ ಮೊದಲ ರಾಜ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ಸುದೀರ್ಥ ಅವಧಿಗೆ ಸಿಂಹಾಸನದಲ್ಲಿದ್ದ ಎರಡನೇ ರಾಜನ ದಾಖಲೆ ಇದುವರೆಗೆ ಥಾಯ್ಲೆಂಡ್‌ನ ರಾಜ ಭುಮಿಬೊಲ್‌ ಅದುಲ್ಯದೆಜ್‌ ಅವರ ಹೆಸರಲ್ಲಿತ್ತು.1927ರಿಂದ 2016ರ ನಡುವೆ ಅವರು 70 ವರ್ಷ 126 ದಿನ ಸಿಂಹಾಸನದಲ್ಲಿದ್ದರು. ಇದೀಗ 96 ವರ್ಷದ ಬ್ರಿಟನ್‌ನ ರಾಣಿ ಈ ದಾಖಲೆ ಮುರಿದಿದ್ದಾರೆ.

1953ರಲ್ಲಿ ಬ್ರಿಟನ್ ರಾಣಿಯಾಗಿ ಪಟ್ಟಕ್ಕೇರಿದ್ದ 2ನೇ ಎಲಿಜಬೆತ್ ಅವರು 2015ರಲ್ಲಿ ತಮ್ಮ ಅಜ್ಜಿ ವಿಕ್ಟೋರಿಯಾ ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದು, ಬ್ರಿಟನ್‌ ರಾಜಮನೆತನದ ದೀರ್ಘಾವಧಿಯ ರಾಣಿ ಎನಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.