ADVERTISEMENT

ವಾಷಿಂಗ್ಟನ್‌: ಬ್ರಿಟನ್‌ ಜತೆಗಿನ ವ್ಯಾಪಾರ ಒಪ್ಪಂದ ಚುರುಕು

ಏಜೆನ್ಸೀಸ್
Published 7 ಆಗಸ್ಟ್ 2019, 14:44 IST
Last Updated 7 ಆಗಸ್ಟ್ 2019, 14:44 IST

ವಾಷಿಂಗ್ಟನ್‌: ಬ್ರೆಕ್ಸಿಟ್‌ ಬಳಿಕ ಅಮೆರಿಕದ ಜತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಬ್ರಿಟನ್‌ ಸಿದ್ಧತೆ ನಡೆಸಿದೆ.

ಬ್ರಿಟನ್‌ ಐರೋಪ್ಯ ಒಕ್ಕೂಟದಿಂದ ಹೊರಬಂದ ಬಳಿಕ ಅಮೆರಿಕ ಹಾಗೂ ಬ್ರಿಟನ್‌ ನಡುವಿನ ವ್ಯಾಪಾರ ಇಮ್ಮಡಿಯಾಗಲಿದೆ ಎಂದು ಇತ್ತೀಚಿಗೆ ಟ್ರಂಪ್‌ ಹೇಳಿದ್ದರು.

ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸಲು ಬ್ರಿಟನ್‌ ರಾಜತಾಂತ್ರಿಕ ಅಧಿಕಾರಿ ಮತ್ತು ವಿದೇಶ ವ್ಯವಹಾರಗಳ ಸಚಿವರು ವಾಷಿಂಗ್ಟನ್‌ಗೆ ತೆರಳಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ವ್ಯಾಪಾರ ಕಾರ್ಯದರ್ಶಿ ಲಿಜ್‌ ಟ್ರಸ್‌ ಅವರು ಅಮೆರಿಕದ ಉನ್ನತ ಅಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರು ತಮ್ಮ ಸಹವರ್ತಿ ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್‌ ಪೊಪಿಯೊ ಅವರೊಂದಿಗೆ ನಡೆಸಬೇಕಿದ್ದ ಮಾತುಕತೆಯನ್ನು ಕಾರಣಾಂತರಗಳಿಂದ ತಡೆಹಿಡಿಯಲಾಗಿದೆ.

‘ಅತ್ಯಾಕರ್ಷಕವಾದ ಹೊಸ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕದ ಜೊತೆ ಮಾತುಕತೆ ನಡೆಸುವುದು ಮತ್ತು ಸಹಿ ಮಾಡುವುದು ನನ್ನ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ’ ಎಂದುಲಿಜ್‌ ಟ್ರಸ್‌ ತಿಳಿಸಿದ್ದಾರೆ.

‘ಇದು ಬಹಳ ಗಮನಾರ್ಹವಾದ ವ್ಯಾಪಾರ ಒಪ್ಪಂದ ಎಂದು ನಾನು ಭಾವಿಸುತ್ತೇನೆ. ಈಗಾಗಲೇ ಇದರ ಪ್ರಕ್ರಿಯೆ ಪ್ರಾರಂಭವಾಗಿದೆ’ ಎಂದು ಟ್ರಂಪ್‌ ತಿಳಿಸಿದ್ದಾರೆ.

ಏನೇ ಸವಾಲು ಎದುರಾದರೂ, ಐರೋಪ್ಯ ಒಕ್ಕೂಟ ತೊರೆಯುವುದು ನನ್ನ ಪಾಲಿಗೆ ಮಾಡು ಇಲ್ಲವೇ ಮಡಿ ಹೋರಾಟ ಎಂದು ನೂತನ ಪ್ರಧಾನಿ ಜಾನ್ಸನ್‌ ಬೋರಿಸ್ ಅಕ್ಟೋಬರ್ 31ರ ಗಡುವನ್ನು ವಿಧಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿವ್ಯಾಪಾರ ಒಪ್ಪಂದಕ್ಕೆ ಟ್ರಂಪ್‌ ಸರ್ಕಾರ ಹೆಚ್ಚು ಮಹತ್ವ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.