ADVERTISEMENT

ಬ್ರೂನಿ: ಕಠಿಣ ಶರಿಯಾ ಕಾನೂನು ಜಾರಿ

ಏಜೆನ್ಸೀಸ್
Published 3 ಏಪ್ರಿಲ್ 2019, 20:23 IST
Last Updated 3 ಏಪ್ರಿಲ್ 2019, 20:23 IST

ಬಂದರ್‌ ಸೆರಿ ಬೆಗಾವನ್‌, ಬ್ರೂನಿ: ಅನೈತಿಕ ಸಂಬಂಧ ಮತ್ತು ಸಲಿಂಗರತಿಗಳನ್ನು ಕಲೆಸೆದು ಸಾಯಿಸಲು ಅವಕಾಶ ಕಲ್ಪಿಸುವ ಹೊಸ ಶರಿಯಾ ಕಾನೂನನ್ನು ರಾಜ ಹಾಸನಲ್ ಬೊಲ್ಕಿಯಾ ಇಲ್ಲಿ ಜಾರಿಗೊಳಿಸಿದ್ದಾರೆ.

ಇದಕ್ಕೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಮಾನವ ಹಕ್ಕುಗಳ ಸಂಘಟನೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಕಳ್ಳತನ ಅಪರಾಧಿಗಳಕೈ ಮತ್ತು ಕಾಲುಗಳನ್ನು ಕತ್ತರಿಸುವ ಶಿಕ್ಷೆಯನ್ನು ಈ ಕಾನೂನು ಒಳಗೊಂಡಿದೆ.

ADVERTISEMENT

ಅತ್ಯಾಚಾರ ಮತ್ತು ದರೋಡೆ ಮಾಡಿದರೆ, ಪ್ರವಾದಿ ಮೊಹಮ್ಮದರನ್ನು ಅವಮಾನಿಸಿದವರಿಗೆ ಮರಣದಂಡನೆ ವಿಧಿಸಲಾಗುವುದು. ಮುಸ್ಲಿಂ ಮತ್ತು ಮುಸ್ಲಿಮೇತರರಿಗೂ ಇದು ಅನ್ವಯಿಸುತ್ತದೆ.

ಈ ಕಾನೂನುಗಳಿಗೆ ಜಾಗತಿಕವಾಗಿ ವಿರೋಧ ವ್ಯಕ್ತವಾಗಿದ್ದು ಇದು ‘ಕ್ರೂರ ಮತ್ತು ಅಮಾನವೀಯ’ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.

ಈ ಕಾನೂನು ಜಾರಿಗೊಂಡಿರುವುದನ್ನು ಸರ್ಕಾರಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಶರಿಯಾ ಕಾನೂನನ್ನು ಪಾಲಿಸುತ್ತಿರುವ ಮಧ್ಯಪ್ರಾಚ್ಯ ರಾಷ್ಟ್ರಗಳ ಸಾಲಿಗೆ ಬ್ರೂನಿ ಸೇರ್ಪಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.