ನಾಮ್ ಪೆನ್/ಕಾಂಬೋಡಿಯಾ: ‘ಮೂರು ವಾರದಲ್ಲಿ ಹುದ್ದೆಯಿಂದ ಕೆಳಗಿಳಿಯಲಿದ್ದು, ನನ್ನ ಹಿರಿಯ ಮಗನಿಗೆ ಅಧಿಕಾರ ಹಸ್ತಾಂತರಿಸುವೆ’ ಎಂದು ಕಾಂಬೋಡಿಯಾದ ದೀರ್ಘಾವಧಿಯ ಪ್ರಧಾನಮಂತ್ರಿ ಹುನ್ ಸೆನ್ ಬುಧವಾರ ತಿಳಿಸಿದ್ದಾರೆ.
ವಾರಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಕಾಂಬೋಡಿಯನ್ ಪೀಪಲ್ಸ್ ಪಾರ್ಟಿ ಜಯಭೇರಿ ಬಾರಿಸಿದ ನಂತರ ಈ ಪ್ರಕಟಣೆ ಹೊರಬಿದ್ದಿದೆ.
ಹುನ್ ಸೆನ್ 38 ವರ್ಷದಿಂದಲೂ ಕಾಂಬೋಡಿಯಾದ ನಿರಂಕುಶ ನಾಯಕನಾಗಿದ್ದಾರೆ. ಇದೀಗ ದೇಶದ ಸೇನೆಯ ಮುಖ್ಯಸ್ಥರಾಗಿರುವ ತಮ್ಮ ಪುತ್ರ ಹುನ್ ಮಾನೆಟ್ (45)ಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.
‘ಮಾನೆಟ್ ಐದು ವರ್ಷ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ನಡೆಸಲಿದ್ದಾರೆ’ ಎಂದು ಹುನ್ ಸೆನ್ ತಮ್ಮ ದೂರದರ್ಶನದ ಭಾಷಣದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.