ADVERTISEMENT

ಟರ್ಕಿ ಗಡಿ ಭಾಗದಲ್ಲಿ ಕಾರ್‌ ಬಾಂಬ್‌ ಸ್ಫೋಟ: 16 ಮಂದಿ ಸಾವು

ಏಜೆನ್ಸೀಸ್
Published 11 ಡಿಸೆಂಬರ್ 2020, 6:37 IST
Last Updated 11 ಡಿಸೆಂಬರ್ 2020, 6:37 IST

ಬೈರೂತ್‌: ‘ಟರ್ಕಿ ಹಿಡಿತದಲ್ಲಿರುವ ರಾಸ್‌ ಅಲ್‌ ಐನ್‌ ಗಡಿ ಪಟ್ಟಣದ ಚೆಕ್‌ ಪಾಯಿಂಟ್‌ ಬಳಿ ಸಂಭವಿಸಿದ ಕಾರ್‌ ಬಾಂಬ್‌ ಸ್ಫೋಟದಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಇಬ್ಬರು ನಾಗರಿಕರು ಸೇರಿದ್ದಾರೆ’ ಎಂದು ವಾರ್‌ ಮಾನಿಟರ್‌ ಗುರುವಾರ ತಿಳಿಸಿದೆ.

‘11 ಮಂದಿ ಭದ್ರತಾ ಸಿಬ್ಬಂದಿಯೂ ಸಾವಿಗೀಡಾಗಿದ್ದು, 12 ಜನ ಗಾಯಗೊಂಡಿದ್ದಾರೆ’ ಎಂದೂ ವಾರ್‌ ಮಾನಿಟರ್‌ ಹೇಳಿದೆ.

‘ಸ್ಫೋಟದಲ್ಲಿ ಇಬ್ಬರು ಯೋಧರು ಅಸು ನೀಗಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ’ ಎಂದು ಟರ್ಕಿ ತಿಳಿಸಿದೆ.

ADVERTISEMENT

ಹೋದ ತಿಂಗಳು ಬೈಕ್‌ನಲ್ಲಿ ಬಾಂಬ್‌ ಇಟ್ಟು ಸ್ಫೋಟಿಸಲಾಗಿತ್ತು. ತರಕಾರಿ ಮಾರುಕಟ್ಟೆಯಲ್ಲಿ ನಡೆದ ಈ ಸ್ಫೋಟದಲ್ಲಿ ಒಟ್ಟು ಎಂಟು ಮಂದಿ ಮೃತಪಟ್ಟಿದ್ದರು.

ಹೋದ ವರ್ಷ ಸಿರಿಯಾದ ಗಡಿಯೊಳಗೆ ದಾಳಿ ನಡೆಸಿದ್ದ ಟರ್ಕಿಯ ಸೇನಾಪಡೆಯು ಕುರ್ದಿಷ್‌ ಪಡೆಗಳಿಗೆ ಸೇರಿದ್ದ 120 ಕಿಲೊ ಮೀಟರ್ಸ್‌ ಭೂ ಭಾಗವನ್ನು ವಶಪಡಿಸಿಕೊಂಡಿತ್ತು. ಅದಾ‌ದ ಬಳಿಕ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನೆಲೆಗೊಂಡಿದ್ದು, ರಾಸ್‌ ಅಲ್‌ ಐನ್‌ನಲ್ಲಿ ಇಂತಹ ಸ್ಫೋಟಗಳು ಸಾಮಾನ್ಯ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.