ADVERTISEMENT

ಕೊರೊನಾ: ಪಟ್ಟು ಸಡಿಲಿಸಿದ ಚೀನಾ

ಪಿಟಿಐ
Published 18 ಮೇ 2020, 21:29 IST
Last Updated 18 ಮೇ 2020, 21:29 IST

ಬೀಜಿಂಗ್‌: ಕೊರೊನಾ ವೈರಸ್‌ ಮೂಲ ಪತ್ತೆಯ ತನಿಖೆಯನ್ನು ವಿರೋಧಿಸುತ್ತಿದ್ದ ಚೀನಾ ಇದೀಗ ಪಟ್ಟುಸಡಿಲಿಸಿದೆ.

ತನಿಖೆಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಭೆಯಲ್ಲಿ (ಡಬ್ಲ್ಯುಎಚ್ಎ) ಐರೋಪ್ಯ ಒಕ್ಕೂಟ ಮಂಡಿಸಿದ್ದ ಕರಡು ನಿರ್ಣಯಕ್ಕೆ ಅದೂ ಬೆಂಬಲ ವ್ಯಕ್ತಪಡಿಸಿದೆ.

ಐರೋಪ್ಯ ಒಕ್ಕೂಟ ಮಂಡಿಸಿದ್ದ ಕರಡು ನಿರ್ಣಯಕ್ಕೆ ಭಾರತ ಸೇರಿದಂತೆ 120 ರಾಷ್ಟ್ರಗಳು ಬೆಂಬಲ ನೀಡಿದ್ದವು. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾದ ಡಬ್ಲ್ಯುಎಚ್‌ಎಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಭಾರತ ಆಯ್ಕೆಯಾಗುವ ಸಾಧ್ಯತೆಗಳಿವೆ. ಕರಡು ನಿರ್ಣಯಕ್ಕೆ ಚೀನಾ ಬೆಂಬಲದ ಕುರಿತು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿನ್‌ ಅವರು ಮಾಹಿತಿ ನೀಡಿದರು.

ADVERTISEMENT

‘ಕರಡು ನಿರ್ಣಯಕ್ಕೆ ಎಲ್ಲರೂ ಒಮ್ಮತ ಸೂಚಿಸಿದ್ದಾರೆ. ವೈರಸ್‌ ಮೂಲದ ಕುರಿತು, ಪಶು ಆರೋಗ್ಯ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಸಹಯೋಗದಲ್ಲಿ ಡಬ್ಲ್ಯುಎಚ್‌ಒ ಮುಖ್ಯಸ್ಥರು ಕಾರ್ಯನಿರ್ವಹಿಸಬೇಕು.ಯಾವ ಪ್ರಾಣಿಯಿಂದ ವೈರಸ್‌ ಹರಡಿರಬಹುದು ಹಾಗೂ ವೈರಸ್‌ ಹರಡುವ ಮೂಲಗಳನ್ನು ಆಯಾ ರಾಷ್ಟ್ರಗಳು ಪತ್ತೆ ಹಚ್ಚಬೇಕು’ ಎಂದು ಡಬ್ಲ್ಯುಎಚ್‌ಎ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.