ADVERTISEMENT

ಚಳಿಗಾಲದ ಒಲಿಂಪಿಕ್ಸ್ ಹಿನ್ನೆಲೆ; ಕೋವಿಡ್‌ ವಿರುದ್ಧ ಚೀನಾ ಕಠಿಣ ಹೋರಾಟ

ಏಜೆನ್ಸೀಸ್
Published 25 ಅಕ್ಟೋಬರ್ 2021, 6:12 IST
Last Updated 25 ಅಕ್ಟೋಬರ್ 2021, 6:12 IST
ಚೀನಾದಲ್ಲಿ ಹೊಸ ಕೋವಿಡ್‌ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೀಜಿಂಗ್‌ನ ಶಾಪಿಂಗ್‌ ಮಾಲ್‌ ಮತ್ತು ರಸ್ತೆ ಬದಿಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಕೋವಿಡ್‌ ಪರೀಕ್ಷೆಗೆ ಸಾಲುಗಟ್ಟಿ ನಿಂತಿರುವ ದೃಶ್ಯ –ರಾಯಿಟರ್ಸ್‌ ಚಿತ್ರ
ಚೀನಾದಲ್ಲಿ ಹೊಸ ಕೋವಿಡ್‌ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೀಜಿಂಗ್‌ನ ಶಾಪಿಂಗ್‌ ಮಾಲ್‌ ಮತ್ತು ರಸ್ತೆ ಬದಿಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಕೋವಿಡ್‌ ಪರೀಕ್ಷೆಗೆ ಸಾಲುಗಟ್ಟಿ ನಿಂತಿರುವ ದೃಶ್ಯ –ರಾಯಿಟರ್ಸ್‌ ಚಿತ್ರ   

ಬೀಜಿಂಗ್: ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಪಿಂಕ್ಸ್‌ಗೆ ಮುನ್ನವೇ ಹೊಸ ಕೋವಿಡ್‌ನ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಚೀನಾದ ಉತ್ತರ ಭಾಗದಲ್ಲಿರುವ ನಗರಗಳಲ್ಲಿ ಜನರು ಕಟ್ಟುನಿಟ್ಟಾಗಿ ಮನೆಯಲ್ಲೇ ಇರುವಂತೆ ಸರ್ಕಾರ ಸೋಮವಾರ ಆದೇಶಿಸಿದೆ.

ಅಗತ್ಯವಿರದ ಹೊರತು ಯಾರೂ ನಗರವನ್ನು ತೊರೆಯದಂತೆ ಬೀಜಿಂಗ್‌ನ ನಿವಾಸಿಗಳಿಗೂ ಸೂಚಿಸಲಾಗಿದೆ. ಈ ಕಟ್ಟು ನಿಟ್ಟಿನ ಆದೇಶದ ನಡುವೆ ನಗರದಲ್ಲಿ ನಿಯಮಿತ ಸಾರಿಗೆ ಸೇವೆಗಳನ್ನು ಮುಂದುವರಿಸಲು ಅನುಮತಿ ನೀಡಲಾಗಿದೆ.

ಚೀನಾದಲ್ಲಿ ಸೋಮವಾರ 39 ಕೋವಿಡ್‌ ಹೊಸ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳ ಜೊತೆಗೆ, ಕಳೆದ ವಾರದಿಂದ 100 ಮಂದಿಗೆ ಕೋವಿಡ್‌ನ ಡೆಲ್ಟಾ ರೂಪಾಂತರ ಸೋಂಕು ದೃಢಪಟ್ಟಿದೆ.

ADVERTISEMENT

ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಈಗ ಚೀನಾದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇದೆ. ಆದರೆ, ಚಳಿಗಾಲದ ಒಲಿಂಪಿಕ್ಸ್‌ಗೆ 100 ದಿನಗಳು ಬಾಕಿ ಇರುವಂತೆ ಇಡೀ ಸೋಂಕನ್ನು ಶೂನ್ಯಕ್ಕಿಳಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಬೀಜಿಂಗ್‌ನ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಭಾನುವಾರ ಆಯೋಜಿಸಿದ್ದ 30 ಸಾವಿರ ಓಟಾಗಾರರ ಮ್ಯಾರಥಾನ್ ಕೂಟವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.