ADVERTISEMENT

ಉತ್ತರ ಚೀನಾದಲ್ಲಿ ದಿಢೀರ್‌ ಪ್ರವಾಹ: ಎಂಟು ಸಾವು, ನಾಲ್ವರು ನಾಪತ್ತೆ

ಏಜೆನ್ಸೀಸ್
Published 17 ಆಗಸ್ಟ್ 2025, 16:03 IST
Last Updated 17 ಆಗಸ್ಟ್ 2025, 16:03 IST
<div class="paragraphs"><p>ಪ್ರವಾಹ</p></div>

ಪ್ರವಾಹ

   

ರಾಯಿಟರ್ಸ್‌ ಚಿತ್ರ

ತೈಪೆ (ತೈವಾನ್‌): ಉತ್ತರ ಚೀನಾದಲ್ಲಿ ಸಂಭವಿಸಿದ ದಿಢೀರ್‌ ಪ್ರವಾಹದಲ್ಲಿ ಎಂಟು ಜನರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಕಾಣೆಯಾಗಿದ್ದಾರೆ ಎಂದು ಮಾಧ್ಯಮವೊಂದು ಭಾನುವಾರ ವರದಿ ಮಾಡಿದೆ.

ADVERTISEMENT

‘ಉರಾದ್ ರಿಯರ್ ಬ್ಯಾನರ್‌’ನ ಶಿಬಿರ ಇರುವ ಪ್ರದೇಶದಲ್ಲಿ ಶನಿವಾರ ಪ್ರವಾಹ ಸಂಭವಿಸಿದ್ದು, 13 ಮಂದಿ ಶಿಬಿರಾರ್ಥಿಗಳು ನಾಪತ್ತೆಯಾಗಿದ್ದರು. ಭಾನುವಾರ ಒಬ್ಬರನ್ನು ರಕ್ಷಿಸಲಾಗಿದೆ ಮತ್ತು ಎಂಟು ಮೃತದೇಹಗಳು ಪತ್ತೆಯಾಗಿವೆ. ಕಾಣೆಯಾದ ಉಳಿದ ನಾಲ್ವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಸುದ್ದಿಸಂಸ್ಥೆಯೊಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.