ADVERTISEMENT

ಚೀನಾದ ಬೈಸೆ ನಗರದಲ್ಲಿ ಲಾಕ್‌ಡೌನ್‌

ಏಜೆನ್ಸೀಸ್
Published 8 ಫೆಬ್ರುವರಿ 2022, 14:40 IST
Last Updated 8 ಫೆಬ್ರುವರಿ 2022, 14:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಇಲ್ಲಿ ಚಳಿಗಾಲದ ಒಲಂಪಿಕ್ಸ್‌ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಸೋಂಕಿನ ತೀವ್ರ ಹರಡುವಿಕೆ ತಡೆಗಾಗಿ ವಿಯೆಟ್ನಾಂ ಸಮೀಪದ ಚೀನಾದ ಬೈಸೆ ನಗರದಲ್ಲಿ ಲಾಕ್‌ಡೌನ್‌ ಹೇರಲಾಗಿದೆ.

14 ಲಕ್ಷ ಜನಸಂಖ್ಯೆ ಇರುವಬೈಸೆ ನಗರದ ನಿವಾಸಿಗಳಿಗೆ ಸಾಮೂಹಿಕ ಸೋಂಕು ಪರೀಕ್ಷೆಗೆ ಆದೇಶಿಸಲಾಗಿದೆ. ಮಂಗಳವಾರ 135 ಮಂದಿಗೆ ಸೋಂಕು ದೃಢಪಟ್ಟಿದೆ, ಇಬ್ಬರಲ್ಲಿ ಓಮೈಕ್ರಾನ್‌ ವೈರಾಣು ಕಾಣಿಸಿಕೊಂಡಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಚೀನಾದಲ್ಲಿ ಇದುವರೆಗೆ 1,06,524 ಪ್ರಕರಣಗಳು ವರದಿಯಾಗಿದ್ದು, 4,363 ಮಂದಿ ಮೃತಪ‍ಟ್ಟಿದ್ದಾರೆ. ಸದ್ಯ 1,473 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.