ADVERTISEMENT

ಚೀನಾದಲ್ಲಿ ಕೋವಿಡ್‌ ಏರಿಕೆ: ಒಂದೇ ದಿನ 29 ಸಾವಿರ ಹೊಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 16:20 IST
Last Updated 23 ನವೆಂಬರ್ 2022, 16:20 IST

ಶಾಂಗೈ: ಚೀನಾದಲ್ಲಿ ಕೋವಿಡ್‌ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಮಂಗಳವಾರ ಒಂದೇ ದಿನ 29,157 ಪ್ರಕರಣಗಳು ದಾಖಲಾಗಿವೆ.

ಇದರಲ್ಲಿ 2,719 ಪ್ರಕರಣಗಳಲ್ಲಿ ರೋಗದ ಲಕ್ಷಣಗಳಿದ್ದರೆ, 26,438 ಪ್ರಕರಣಗಳು ಲಕ್ಷಣ ರಹಿತವಾಗಿವೆ. ಸೋಮವಾರ 28,127 ಪ್ರಕರಣಗಳು ದಾಖಲಾಗಿದ್ದವು ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಬುಧವಾರ ಹೇಳಿದೆ.

ನ.22ರವರೆಗೆ ಚೀನಾದಲ್ಲಿ ಕೋವಿಡ್‌ ಸೋಂಕು ಲಕ್ಷಣದ2,93,500 ಪ್ರಕರಣಗಳು ದೃಢಪಟ್ಟಿವೆ. ಸಾವಿನ ಹೊಸ ಪ್ರಕರಣಗಳು ದಾಖಲಾಗಿಲ್ಲ.ಬೀಜಿಂಗ್‌, ಶಾಂಘೈ, ಗುವಾಂಗೌ ಹಾಗೂ ಚಾಂಗ್‌ಕಿಂಗ್‌ನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.