ADVERTISEMENT

ಸಿಂಧೂ ಕಣಿವೆ ನಾಗರಿಕತೆ ಉಗಮ– ಅವನತಿಗೆ ಹವಾಮಾನ ಬದಲಾವಣೆ ಕಾರಣ

ಭಾರತೀಯ ಮೂಲದ ವಿಜ್ಞಾನಿ ನಿಶಾಂತ್ ನಡೆಸಿದ ಅಧ್ಯಯನ

ಪಿಟಿಐ
Published 4 ಸೆಪ್ಟೆಂಬರ್ 2020, 8:44 IST
Last Updated 4 ಸೆಪ್ಟೆಂಬರ್ 2020, 8:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್: ಹವಾಮಾನ ವೈಪರೀತ್ಯದಿಂದಾಗಿ ಮುಂಗಾರು ಮಾರುತಗಳಲ್ಲಿ ಉಂಟಾದ ವ್ಯತ್ಯಾಸವು ಸಿಂಧೂ ಕಣಿವೆಯ ನಾಗರಿಕತೆಯ ಉಗಮ ಮತ್ತು ಅವನತಿಗೆ ಕಾರಣವಾಗಿರಬಹುದು ಎಂದು ಭಾರತೀಯ ಮೂಲದ ವಿಜ್ಞಾನಿಯೊಬ್ಬರು ಇತ್ತೀಚೆಗೆ ನಡೆಸಿದ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಅಮೆರಿಕದ ರೋಚೆಸ್ಟರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ (ಆರ್‌ಟಿಐ) ವಿಜ್ಞಾನಿ ನಿಶಾಂತ್ ಮಲಿಕ್ ಅವರು, ಸಿಂಧೂ ಕಣಿವೆ ನಾಗರಿಕತೆ ವ್ಯಾಪ್ತಿಯಲ್ಲಿದ್ದ ಉತ್ತರ ಭಾರತದಲ್ಲಿ ಲಭ್ಯವಾದ 5700 ವರ್ಷಗಳಷ್ಟು ಹಿಂದಿನ ಮಾಹಿತಿಯನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ.

ಪ್ರಾಚೀನಕಾಲದಲ್ಲಿ ಉತ್ತರ ಭಾರತದಲ್ಲಿ ಒಂದು ಅವಧಿಯಲ್ಲಿ ಉಂಟಾದ ಹವಾಮಾನ ಬದಲಾವಣೆಯ ಮಾದರಿಗಳನ್ನು ನಿಶಾಂತ್‌ ಅವರು ವಿಶ್ಲೇಷಿಸಿದ್ದಾರೆ. ಹೊಸ ಗಣಿತದ ವಿಧಾನವನ್ನು ಬಳಸಿಕೊಂಡು ಈ ವಿಶ್ಲೇಷಣೆ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.