ADVERTISEMENT

ಮಿಯಾಮಿ ಕಟ್ಟಡ ಕುಸಿತ: ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

ಏಜೆನ್ಸೀಸ್
Published 26 ಜೂನ್ 2021, 5:30 IST
Last Updated 26 ಜೂನ್ 2021, 5:30 IST
ಅಮೆರಿಕದ ಫ್ಲಾರಿಡಾದ ಮಿಯಾಮಿಯಲ್ಲಿ ಸಂಭವಿಸಿದ ಕಟ್ಟಡ ಕುಸಿತ ದುರಂತದಲ್ಲಿ, ಕಟ್ಟಡದ ಅವಶೇಷಗಳಡಿ ಸಿಲುಕಿರುವ ತಮ್ಮವರು ಸುರಕ್ಷಿತವಾಗಿರಲೆಂದು ಪ್ರಾರ್ಥಿಸುತ್ತಿರುವ ಅವರ ಕುಟುಂಬದ ಸದಸ್ಯರು.
ಅಮೆರಿಕದ ಫ್ಲಾರಿಡಾದ ಮಿಯಾಮಿಯಲ್ಲಿ ಸಂಭವಿಸಿದ ಕಟ್ಟಡ ಕುಸಿತ ದುರಂತದಲ್ಲಿ, ಕಟ್ಟಡದ ಅವಶೇಷಗಳಡಿ ಸಿಲುಕಿರುವ ತಮ್ಮವರು ಸುರಕ್ಷಿತವಾಗಿರಲೆಂದು ಪ್ರಾರ್ಥಿಸುತ್ತಿರುವ ಅವರ ಕುಟುಂಬದ ಸದಸ್ಯರು.   

ಸರ್ಫ್‌ಸೈಡ್‌ (ಅಮೆರಿಕ): ಫ್ಲಾರಿಡಾ ರಾಜ್ಯದ ಮಿಯಾಮಿಯಲ್ಲಿ ಗುರುವಾರ ಸಂಭವಿಸಿದ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ವಕ್ಕೆ ಏರಿದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ ಮುಂದುವರಿದಿದೆ.

ಅಲ್ಲದೆ ಈ ಕಟ್ಟಡದಲ್ಲಿ ವಾಸವಿದ್ದರು ಎನ್ನಲಾಗಿರುವ 160ಕ್ಕೂ ಹೆಚ್ಚು ಜನರ ಶೋಧಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಕಟ್ಟಡ ಕುಸಿಯುವ ವೇಳೆ ಅವರು ಕಟ್ಟಡದಲ್ಲಿ ಇದ್ದರೋ, ಇಲ್ಲವೋ ಎಂಬುದರ ಖಚಿತ ಮಾಹಿತಿ ಇಲ್ಲ. ಹಾಗಾಗಿ ಈ ಕುರಿತೂ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಟ್ಟಡದ ಕಲ್ಲು, ಮಣ್ಣು ರಾಶಿಗಳ ತೆರವಿಗಾಗಿ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಲಾಗುತ್ತಿದ್ದೆ. ಡ್ರೋನ್, ಮೈಕ್ರೋಫೋನ್‌ಗಳ ನೆರವಿನಿಂದ ಕಟ್ಟಡದ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ.

ADVERTISEMENT

ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರ ಕುಟುಂಬದ ಸದಸ್ಯರ ಸಂಬಂಧಿಕರು ಮತ್ತು ಸ್ನೇಹಿತರು, ‘ತಮ್ಮವರು ಸುರಕ್ಷಿತವಾಗಿರಲಿ‘ ಎಂದು ಪ್ರಾರ್ಥಿಸುತ್ತಿದ್ದಾರೆ.

ಮಿಯಾಮಿಯ ಸಮುದ್ರ ತೀರದಲ್ಲಿರುವ 12 ಅಂತಸ್ತಿನ ಕಟ್ಟಡದ ದಕ್ಷಿಣ ಭಾಗದಲ್ಲಿರುವ ಚಾಂಪ್ಲೇನ್‌ ಟವರ್ಸ್‌ ಗುರುವಾರ ಕುಸಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.