ADVERTISEMENT

Covid-19 World Update: 2.75 ಕೋಟಿ ಪ್ರಕರಣ, 1.96 ಕೋಟಿ ಮಂದಿ ಗುಣಮುಖ

ಏಜೆನ್ಸೀಸ್
Published 8 ಸೆಪ್ಟೆಂಬರ್ 2020, 16:51 IST
Last Updated 8 ಸೆಪ್ಟೆಂಬರ್ 2020, 16:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೈರೋ: ಕೋವಿಡ್‌ ಲಾಕ್‌ಡೌನ್‌ನಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ತೀವ್ರ ಆರ್ಥಿಕ ಹಿಂಜರಿತ ಉಂಟಾಗಿದೆ. ತಯಾರಿಕಾ ವಲಯದಲ್ಲಿ ಶೇ 74.9ರಷ್ಟು ಕುಸಿತ ಉಂಟಾಗಿದೆ. ಈವರೆಗೂ ದೇಶದಲ್ಲಿ 6,39,362 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 15,000 ಮಂದಿ ಸಾವಿಗೀಡಾಗಿದ್ದಾರೆ.

ಜಗತ್ತಿನಾದ್ಯಂತ ಒಟ್ಟು 2,75,71,441 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 1,96,59,072 ಮಂದಿ ಗುಣಮುಖರಾಗಿದ್ದಾರೆ. ವರ್ಡೋಮೀಟರ್‌ ವೆಬ್‌ಸೈಟ್‌ ಮಾಹಿತಿ ಪ್ರಕಾರ, ಸೋಂಕಿನಿಂದ 8,98,188 ಮಂದಿ ಸಾವಿಗೀಡಾಗಿದ್ದಾರೆ.

ಅಮೆರಿಕದಲ್ಲಿ 64,93,058 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 37,60,821 ಮಂದಿ ಗುಣಮುಖರಾಗಿದ್ದಾರೆ. 1,93,673 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ನೇಪಾಳದಲ್ಲಿ 902 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 48,000ರ ಗಡಿ ದಾಟಿದೆ.

‘ಈಜಿಪ್ಟ್‌ನಲ್ಲಿ ಈವರೆಗೆ 1,00,041 ಮಂದಿಗೆ ಸೋಂಕು ತಗುಲಿದ್ದು, 5,541 ಮಂದಿ ಮೃತಪಟ್ಟಿದ್ದಾರೆ. 79,000 ಜನ ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಉಳಿದಂತೆ ಈವರೆಗೆ ಬ್ರೆಜಿಲ್‌ನಲ್ಲಿ 41,50,311, ಭಾರತದಲ್ಲಿ 43,13,129, ರಷ್ಯಾದಲ್ಲಿ 10,35,789, ಪೆರುವಿನಲ್ಲಿ 6,91,575 , ಕೊಲಂಬಿಯಾದಲ್ಲಿ 6,71,848, ಚಿಲಿಯಲ್ಲಿ 4,24,274, ಇರಾನ್‌ನಲ್ಲಿ 3,88,810, ಬ್ರಿಟನ್‌ನಲ್ಲಿ 3,52,451 ಮತ್ತು ಸ್ಪೇನ್‌ನಲ್ಲಿ 5,25,549 ಕೋವಿಡ್–19 ಸೋಂಕು ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.