ADVERTISEMENT

ಕೋವಿಶೀಲ್ಡ್‌ ಲಸಿಕೆ ಸುರಕ್ಷತೆ ಕುರಿತ ಪರೀಕ್ಷೆಗೆ ಆಗ್ರಹ

ಪಿಟಿಐ
Published 6 ಫೆಬ್ರುವರಿ 2023, 15:30 IST
Last Updated 6 ಫೆಬ್ರುವರಿ 2023, 15:30 IST
   

ಲಂಡನ್‌: ಆಕ್ಸ್‌ಫರ್ಡ್‌/ಆಸ್ಟ್ರಾಜೆನಿಕಾ ತಯಾರಿಸಿರುವ ಕೋವಿಡ್‌–19 ಲಸಿಕೆ ‘ಕೋವಿಶೀಲ್ಡ್‌’ ಆರೋಗ್ಯಕ್ಕೆ ಎಷ್ಟು ಸುರಕ್ಷಿತ ಎಂಬ ಕುರಿತು ಕೂಲಂಕಶ ಪರೀಕ್ಷೆ ನಡೆಸಬೇಕು ಎಂಬ ಭಾರತ ಮೂಲದ ಬ್ರಿಟನ್‌ ಹೃದ್ರೋಗತಜ್ಞ ಡಾ. ಅಸೀಮ್‌ ಮಲ್ಹೋತ್ರ ಅವರ ಆಗ್ರಹಕ್ಕೆ ಭಾರತದ ಹಲವಾರು ವೈದ್ಯರು ಬೆಂಬಲ ಸೂಚಿಸಿದ್ದಾರೆ.

ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂಥ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂಬ ಭೀತಿ ಇರುವ ಕಾರಣ ಅವರು ಈ ಆಗ್ರಹ ಮಾಡಿದ್ದಾರೆ.

ಕಳೆದವಾರ ಭಾರತಕ್ಕೆ ಆಗಮಿಸಿರುವ ಅವರು, ಆಸ್ಟ್ರಾಜೆನಿಕಾ ಕೋವಿಡ್‌ ಲಸಿಕೆಗಳನ್ನು ಯುರೋಪ್‌ನ ಹಲವಾರು ದೇಶಗಳು 2021ರ ಆರಂಭದಲ್ಲಿಯೇ ನಿಷೇಧಿಸಿವೆ. ಭಾರತದಲ್ಲಿ ಈ ಲಸಿಕೆಯನ್ನು ನಿಷೇಧಿಸದೇ ಇರುವುದು ಆಶ್ಚರ್ಯ ತರಿಸಿದೆ ಎಂದು ಹೇಳಿದ್ದರು. ಜೊತೆಗೆ, ಲಸಿಕೆ ಕುರಿತು ಕೂಲಂಕಶವಾದ ಪರೀಕ್ಷೆ ನಡೆಯಬೇಕು ಎಂದು ಹೇಳಿದ್ದರು.

ADVERTISEMENT

ಪೀಜರ್‌ ಸಂಸ್ಥೆಯ ಎಂಆರ್‌ಎನ್‌ಎ ಕೋವಿಡ್‌ ಲಸಿಕೆ ಕುರಿತು ಕೂಲಂಕುಶವಾದ ಸಂಶೋಧನೆ ನಡೆಸಿದ ಬಳಿಕ ಈ ಲಸಿಕೆಯು ಜನರ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವುದಕ್ಕಿಂತ ಹೆಚ್ಚು ಅಡ್ಡಪರಿಣಾಮಗಳನ್ನು ಬೀರುತ್ತಿವೆ ಎಂಬ ಮಾಹಿತಿ ಹೊರಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.