ADVERTISEMENT

ಹಿಂಸಾಚಾರಕ್ಕೆ ಪ್ರಚೋದಿಸಿದರೆ ಕಠಿಣ ಕ್ರಮ: ಪಾಕ್‌

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 20:13 IST
Last Updated 3 ನವೆಂಬರ್ 2019, 20:13 IST
   

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ರಕ್ಷಣಾ ಸಚಿವ ಪರ್ವೆಜ್‌ ಖಟ್ಟಕ್‌ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ಇಮ್ರಾನ್ ಖಾನ್ ಮನೆಯ ಮೇಲೆ ದಾಳಿ ನಡೆಸುವ ಮೂಲಕ ರಾಜೀನಾಮೆಗೆ ಒತ್ತಡ ಹಾಕಬಹುದು ಎಂದು ಜಮೈತಾ ಉಲೇಮಾ –ಎ–ಇಸ್ಲಾಮ್‌ ಫಜಲ್‌ (ಜೆಯುಐ–ಎಫ್‌) ಸಂಘಟನೆಯ ಮುಖ್ಯಸ್ಥ ಮೌಲನಾ ಫಜ್ಲುರ್‌ ರೆಹಮಾನ್‌ ಸುಳಿವು ನೀಡಿದ ನಂತರ ಈ ಹೇಳಿಕೆ ಹೊರಬಿದ್ದಿದೆ.

ಪ್ರತಿಭಟನೆ ಮುಂದುವರಿಸಲಾಗುವುದು ಹಾಗೂ ಹಿಂಸಾಚಾರ ನಡೆದರೆ ನಾವು ಕಾರಣರಲ್ಲ ಎಂಬ ಪ್ರತಿಭಟನಾಕಾರರ ಹೇಳಿಕೆ ಬೆನ್ನಲ್ಲೇ ರೆಹಬಾರ್‌ ಸಮಿತಿ (ವಿರೋಧ ಪಕ್ಷಗಳ ಒಕ್ಕೂಟ) ಜತೆ ಸಭೆ ನಡೆಸಿದ ಸಚಿವರು ಈ ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ಸಮಸ್ಯೆಗಳ ಕುರಿತು ವಿರೋಧ ಪಕ್ಷಗಳ ಜತೆ ಮಾತುಕತೆ ಮುಂದುವರಿಯಲಿದೆ’ ಎಂದು ಹೇಳಿರುವ ರಕ್ಷಣಾ ಸಚಿವರು, ಪ್ರಧಾನಿ ರಾಜೀನಾಮೆ ನೀಡಲು ಸಾಧ್ಯವೇ ಇಲ್ಲ’ ಸ್ಪಷ್ಟವಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.