ADVERTISEMENT

ಡ್ರೋನ್ ರಫ್ತು ನಿಯಮ ಸಡಿಲಿಸಿದ ಟ್ರಂಪ್ ಆಡಳಿತ

ಪಿಟಿಐ
Published 25 ಜುಲೈ 2020, 7:40 IST
Last Updated 25 ಜುಲೈ 2020, 7:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಗಮನಾರ್ಹ ಬೆಳವಣಿಗೆಯೊಂದರಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತವು ಮಿತ್ರ ರಾಷ್ಟ್ರಗಳಿಗೆ ಡ್ರೋನ್ ರಫ್ತು ಕುರಿತ ನೀತಿಯನ್ನು ಸಡಿಲಿಸಿದೆ. ಪರಿಷ್ಕೃತ ನೀತಿಯಂತೆ, ಪ್ರತಿ ಗಂಟೆಗೆ 800 ಕಿ.ಮೀ ಗಿಂತಲೂ ಕಡಿಮೆ ವೇಗದಲ್ಲಿ ಚಲಿಸುವ ಡ್ರೋನ್‌ಗಳು ಇನ್ನು ಮುಂದೆ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ (ಎಂಟಿಸಿಆರ್) ವ್ಯಾಪ್ತಿಗೆ ಬರುವುದಿಲ್ಲ.

ಎಂಟಿಸಿಆರ್ ಸಂಬಂಧಿಸಿದಂತೆ ಕೈಗೊಂಡಿರುವ ಮಿತ್ರ ದೇಶಗಳ ಆರ್ಥಿಕ ಭದ್ರತೆಯನ್ನು ಬಲಪಡಿಸುವ ಜೊತೆಗೆ ಅಮೆರಿಕದ ರಾಷ್ಟ್ರೀಯ ಭದ್ರತೆ ಕುರಿತಂತೆಯೂ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

ಅಮೆರಿಕದ ಉದ್ಯಮ ಕ್ಷೇತ್ರದಲ್ಲಿ ಡ್ರೋನ್ ಮಾರುಕಟ್ಟೆಯನ್ನು ವಿಸ್ತರಿಸಲೂ ಈ ನಿರ್ಧಾರವು ನೆರವಾಗಲಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಲೀಗ್ ಮ್ಯಾಕೆನೆ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಈ ನೀತಿಯು ಎಂಟಿಸಿಆರ್ ಕುರಿತ ಬದ್ಧತೆಗಳ ಜಾರಿಗೆ ಪೂರಕವಾಗಿ ನಮ್ಮ ನಿಲುವುಗಳಲ್ಲಿ ಬದಲಾವಣೆಗೆ ನೆರವಾಗಲಿದೆ. ಹೆಚ್ಚು ಪ್ರತಿಕ್ರಿಯಾತ್ಮಕ ಮತ್ತು ತಂತ್ರಜ್ಞಾನದ ಬಳಕೆಗೆ ಸಹಕಾರಿ ಆಗಲಿದೆ ಎಂದು ರಾಜಕೀಯ ಮತ್ತು ಸೇನಾ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಕ್ಲಾರ್ಕ್ ಕೂಪರ್ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.